Friday, July 31, 2026
Homeಕ್ರೈಮ್ಕೊಪ್ಪ: ಕಾಡು ಪ್ರಾಣಿ ದಾಳಿಯಿಂದ ರೈತ ಅನಿಲ್ʼಗೆ ಗಾಯ: ಆರೋಗ್ಯ ವಿಚಾರಿಸಿದ ವಿಶ್ವನಾಥ್ ಗದ್ದೆಮನೆ

ಕೊಪ್ಪ: ಕಾಡು ಪ್ರಾಣಿ ದಾಳಿಯಿಂದ ರೈತ ಅನಿಲ್ʼಗೆ ಗಾಯ: ಆರೋಗ್ಯ ವಿಚಾರಿಸಿದ ವಿಶ್ವನಾಥ್ ಗದ್ದೆಮನೆ

Telegram Group
Join Now

ಕೊಪ್ಪ ತಾಲೂಕು ಕುಂಚೂರು ಗ್ರಾಮದ ರೈತ ಶ್ರೀ ಅನಿಲ್ ಅವರು ಇತ್ತೀಚೆಗೆ ಕಾಡು ಪ್ರಾಣಿಯ ದಾಳಿಯಿಂದ ಗಾಯಗೊಂಡಿದ್ದವರ ಮನೆಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಷ್ಟು ದಿನ ರೈತರು ಕಾಡಾನೆ ಹಾಗೂ ಕಾಡುಕೋಣಗಳ ದಾಳಿಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಇದೀಗ ಕಾಡುಹಂದಿಗಳ ದಾಳಿಯ ಸುದ್ದಿಯೂ ಕೇಳಿಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಜೀವ ಹಾಗೂ ಬೆಳೆ ರಕ್ಷಣೆಗಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣ ಸೂಕ್ತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಒಕ್ಕೂಟದ ಕಸಬಾ ಹೋಬಳಿ ಅಧ್ಯಕ್ಷರಾದ ಪ್ರದೀಪ್ ಕುಂಚೂರು, ಎನ್.ಆರ್.ಪುರ ತಾಲೂಕು ಅಧ್ಯಕ್ಷರಾದ ಪ್ರದೀಪ್ ಕಿಚ್ಚೆಬ್ಬಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಪೂರ್ಣಚಂದ್ರ, ರೈತ ಒಕ್ಕೂಟದ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಕಾರ್ಬೈಲ್ ಮಂಜುನಾಥ್ ಗೌಡ, ದರ್ಶನ್ ಬಾಳಗಡಿ, ಸುಮಿತ್ ಗೌರಿಗದ್ದೆ, ರಾಜೇಶ್ ಸಿಸ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments