Saturday, May 9, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ: ಮತ್ತಿಕಟ್ಟೆ ಸಮೀಪ ಜಿಂಕೆಯನ್ನ ಅಟ್ಟಾಡಿಸಿ ಕೊಂದ ನಾಯಿಗಳು!

ಕೊಟ್ಟಿಗೆಹಾರ: ಮತ್ತಿಕಟ್ಟೆ ಸಮೀಪ ಜಿಂಕೆಯನ್ನ ಅಟ್ಟಾಡಿಸಿ ಕೊಂದ ನಾಯಿಗಳು!

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಮತ್ತಿಕಟ್ಟೆ ಸಮೀಪ ನಾಯಿ ಅಟ್ಟಾಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆಯು, ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯರು ರಕ್ಷಿಸಿದರೂ, ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ಘಟನೆಯ ನಂತರ ಸಮಾಜಸೇವಕ ಅರೀಫ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಗಾಯಗೊಂಡ ಜಿಂಕೆಯನ್ನು ಸುರಕ್ಷಿತವಾಗಿ ಹಿಡಿದು ಪಶು ಚಿಕಿತ್ಸಾಲಯಕ್ಕೆ ಕರೆತರಿದರು. ಪಶು ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ, ಜಿಂಕೆಯ ಗಾಯಗಳು ಗಂಭೀರವಾಗಿದ್ದರಿಂದ ಅದು ಪ್ರಾಣ ಉಳಿಸಿಕೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿವೆ.

ಜಿಂಕೆಯನ್ನು ರಕ್ಷಿಸಲು ತೋರಿದ ಸಮಾಜ ಸೇವಕ ಆರೀಫ್, ಸ್ಥಳೀಯರು ಹಾಗೂ ಅರಣ್ಯ ಅಧಿಕಾರಿಗಳ ಮಾನವೀಯ ಕಾರ್ಯ ಶ್ಲಾಘನೀಯ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!