ಮೂಡಿಗೆರೆ : ಪ್ರಧಾನಿ ನರೇಂದ್ರ ಮೋದಿಯವರ ಕನಸು. ವಿಕಸಿತ ಭಾರತ ಸಂಕಲ್ಪಕ್ಕೆ. ಸಮಸ್ತ ನಾಗರಿಕರು ಕೈ ಜೋಡಿಸಿ. ಸೇವಾ ಸಂಕಲ್ಪದ ಮೂಲಕ ಭವಿಷ್ಯದ ಭಾರತ ಕಟ್ಟೋಣ. ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ ಕೆ ಪ್ರಾಣೇಶ್ ತಿಳಿಸಿದರು.
ವೇಣುಗೋಪಾಲ ಸ್ವಾಮಿ ಆವರಣದಲ್ಲಿ ಪ್ರಧಾನ ಮಂತ್ರಿ ಅವರ 25 ವರ್ಷ ಅಧಿಕಾರವಧಿ ನೆನಪಿನ ಸೇವಾ ಸಂಕಲ್ಪ ಅಭಿಯಾನದ ಸೇವಾ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. 2047ಕ್ಕೆ ಭಾರತ ಜಗತ್ತಿನ ಮೂರು ಆರ್ಥಿಕ ಶಕ್ತಿಗಳಲ್ಲಿ ಒಂದಾಗಬೇಕು ಎಂಬ ಕನಸಿನೊಂದಿಗೆ ವಿಕಸಿತ ಭಾರತ ಸಂಕಲ್ಪವನ್ನು ಪ್ರಧಾನಿಗಳು ಮಾಡಿದ್ದು. ಇದರ ಅಂಗವಾಗಿ ಕೃಷಿ. ಕೈಗಾರಿಕೆ. ಸೇವಾ ಕ್ಷೇತ್ರ. ಬ್ಯಾಂಕಿಂಗ್. ಹಣಕಾಸು. ರಕ್ಷಣೆ. ವಸತಿ. ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಜಾರಿಗೆ ತಂದಿದ್ದು. ಭಾರತೀಯ ವಸ್ತುಗಳು ಮುಂದಿನ ದಿನಗಳಲ್ಲಿ ವಿಶ್ವದ ಮಾರುಕಟ್ಟೆ ಆಳಬೇಕು ಎಂಬ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದ್ದು. ನಿರ್ಗತಿಕ. ಬಡವರು. ವಸತಿರಹಿತರಿಗೆ ವಿಶೇಷ ಯೋಜನೆಗಳು. ರಸ್ತೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ. ಪ್ರವಾಸೋದ್ಯಮ ನೀತಿ. ಈ ಎಲ್ಲ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಸಹಕಾರ ಗೊಳಿಸಲು ಹಗಲಿರಲು ಶ್ರಮಿಸುತ್ತಿದ್ದಾರೆ. ಇಂತಹ ಮಹಾನ್ ಯೋಗಿಯ ಹುಟ್ಟುಹಬ್ಬ. ಮತ್ತು ಒಂದು ದಿನವೂ ರಜೆ ತೆಗೆದುಕೊಳ್ಳದೆ 25 ವರ್ಷದ ಅಧಿಕಾರ ಅವಧಿಯನ್ನು ನೆನಪಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು
ಭ್ರಷ್ಟಾಚಾರ ರಹಿತ. ಸ್ವಜನ ಪಕ್ಷಪಾತ. ಯಾವುದೇ ಹಗರಣ ಗಳಿಲ್ಲದ ಮೋದಿ ನೇತೃತ್ವದ ಭಾರತೀಯ ನಾಯಕತ್ವಕ್ಕೆ ಜೈ ಹೇಳುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷದ ಕೆಲವರು ಅರಾಜಕತೆ ಸೃಷ್ಟಿಗೆ ಹೊರಟಿದ್ದರು ಇದನ್ನು ಸಮಸ್ತ ಭಾರತೀಯರು ತಿರಸ್ಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಗಜೇಂದ್ರ ಕೊಟ್ಟಿಗೆಹಾರ ಅಧ್ಯಕ್ಷ . ನರೇಂದ್ರ. ಮುಖಾಂಡರಾದ ದೀಪಕ್ ದೊಡ್ಡಯ್ಯ. ಕೆ ಸಿ ರತನ್. ರಘು ಜನ್ನಾಪುರ. ಅವಿನಾಶ್ ಜನ್ನಪುರ, ಸಂತೋಷ್ ಶುಭನಗರ, ಪಂಚಾಕ್ಷರಿ ಹಾಲೂರು. ಮನೋಜ್ ಹೊಳೆಕೋಟೆ. ಪ್ರಮೋದ್ ದುಂಡುಗ. ಸಿದ್ದಯ್ಯ. ವಿಶ್ವಾಸ್ ಮರಬೈಲ್.ಸುಜಿತ್.ಶರತ್, ಸಚಿನ್ ಬಾನಳ್ಳಿ ಲೋಕೇಶ್. ಸುನೀಲ್ ಮಣ್ಣಿಕೆರೆ,ನಯನ ತಳವಾರ ಸೇರಿದಂತೆ ಕಾರ್ಯಕರ್ತರು ಇದ್ದರು
