Sunday, July 26, 2026
Homeಕ್ರೈಮ್Lokayuktha Trap: ಮೂಡಿಗೆರೆಯಲ್ಲಿ 15 ಸಾವಿರ ಲಂಚ ತೆಗೆದುಕೊಳ್ಳುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್

Lokayuktha Trap: ಮೂಡಿಗೆರೆಯಲ್ಲಿ 15 ಸಾವಿರ ಲಂಚ ತೆಗೆದುಕೊಳ್ಳುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್

Telegram Group
Join Now

ಮೂಡಿಗೆರೆ: ಲಂಚ ಪಡೆಯುತ್ತಿದ್ದ ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

ದೇವವೃಂದ ಗ್ರಾಮದ ಮಂಜುನಾಥ್ ಎಂಬುವರ ಕಾಫಿ ತೋಟವನ್ನ ಸರ್ವೇ ಮಾಡಲು ಸುಮಾ ಎಂಬಾ ಲಂಚ ಬಾಕಿ ಸರ್ವೇಯರ್ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದರು. ಇಂದು 15 ಸಾವಿರ ಲಂಚ ಸ್ವೀಕಾರ ವೇಳೆ ಸರ್ವೇಯರ್ ಸುಮಾ ಲೋಕಾ ಬಲೆಗೆ ಬಿದ್ದಿದ್ದಾರೆ.

ಮೂಡಿಗೆರೆ ಪಟ್ಟಣದ ಎಡಿಎಲ್ ಆರ್ ಕಚೇರಿಯಲ್ಲೇ ಲಂಚ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಸರ್ವೇಯರ್ ಸುಮಾಳಂತೆ ಅನೇಕರು ಭ್ರಷ್ಟರು ಸರ್ವೇ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಯಲ್ಲಿ ಜಾಂಡಾ ಉರಿದ್ದು, ಅಂತವರ ಬಂಡವಾಳ ಕೂಡ ಬಯಲಾಗಬೇಕಿದೆ ಅಂತಾ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments