Friday, June 26, 2026
Homeಜಿಲ್ಲಾಸುದ್ದಿಮೂಡಿಗೆರೆ: ಬಿರಂಜಿ ಹಳ್ಳದ ನೀರು ಕಲುಷಿತ: ಸಾವಿರಾರು ಮೀನುಗಳ ಮಾರಣ ಹೋಮ

ಮೂಡಿಗೆರೆ: ಬಿರಂಜಿ ಹಳ್ಳದ ನೀರು ಕಲುಷಿತ: ಸಾವಿರಾರು ಮೀನುಗಳ ಮಾರಣ ಹೋಮ

ಮೂಡಿಗೆರೆ: ಹಳ್ಳದ ನೀರು ಕಲುಷಿತಗೊಂಡಿದ್ದರಿಂದ ಸಾವಿರಾರು ಮೀನು ಮರಿಗಳು ‌ಸಾವನ್ನಪ್ಪಿರುವುದನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ‌ ಕೆಳಗೂರು ಸಮೀಪದ ದಿಣ್ಣೇಕೆರೆ ಗ್ರಾಮದಲ್ಲಿ ನಡೆದಿದೆ.

ಹೌದು .. ಕಾಫಿ ಪಲ್ಪರ್ ನೀರು ಹಳ್ಳಗೆ ಬಿಟ್ಟ ಹಿನ್ನೆಲೆಯಲ್ಲಿ ಕಲುಷಿತಗೊಂಡಿದ್ದು ಇದರಿಂದ ಸಾವಿರಾರು ಮೀನು ಮರಿಗಳು ‌ಸಾವನ್ನಪ್ಪಿದ್ದು ಹೀಗಾಗಿ ಬಿರಂಜಿ‌ ಹಳ್ಳದ ದಡದಲ್ಲಿ ಮೀನುಗಳ ಮಾರಣಹೋಮ ನಡೆದಿದೆ.

ಕಾಫಿ ಪಲ್ಪಿಂಗ್ ನೀರು ಹಳ್ಳಕ್ಕೆ ಬಿಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಯಗಚಿ ನದಿಗೆ ಸೇರುವ‌ ಬಿರಂಜಿ ಹಳ್ಳ ಮೀನು ಮರಿಗಳ ಸಾವಿಗೆ ಕಾರಣವಾದವರ ವಿರುದ್ಧ ಕ್ರಮಕ್ಕೆ ಅಲ್ಲಿನ ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಹಾಗೆ ಹಳ್ಳಕ್ಕೆ ಕಾಫಿ ಪಲ್ಪಿಂಗ್ ನೀರು ಬಿಡದಂತೆ ಒತ್ತಾಯ ಕೂಡ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments