ಭಾರತೀಯ ಜನತಾ ಪಾರ್ಟಿ ವಿವಿಧ ಮೋರ್ಚಾಗಳ ಸಹಯೋಗದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಮೇ 29 ಕ್ಕೆ ಆಯೋಜನೆ ಮಾಡಿರುವುದಾಗಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ತಿಳಿಸಿದರು
ಅವರು ಪತ್ರಕರ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಇದೆ ತಿಂಗಳ 29ರಂದು ಬಿಜೆಪಿ ಕಛೇರಿ ಪಂಚಾವಟಿ ಯಲ್ಲಿ ಅದ್ದೂರಿಯಾಗಿ ಜರುಗಲಿದ್ದು ಕಾರ್ಯಕ್ರಮಕ್ಕೆ ಕೊಳ್ಳೇಗಾಲದ ಮಾಜಿ ಶಾಸಕರು ಹಾಗೂ ವಿದ್ವಾಂಸರು,ರಾಜ್ಯ ಬಿಜೆಪಿ ಉಪಾಧ್ಯಕ್ಷರು ಶ್ರೀಯುತ ಏನ್,ಮಹೇಶ್ ಅವರು ಅಂಬೇಡ್ಕರ್ ಕುರಿತಾಗಿ ಉಪನ್ಯಾಸ ಮಾಡಲಿದ್ದು ಹಾಗೂ ಪ್ರಮುಖ ಭಾಷಣಕಾರರಾಗಿ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರುಗಳು ಅಂಬೇಡ್ಕರ್ ಅವರ ಕುರಿತಾಗಿ ವಿಚಾರ ಮಂಡನೆ ಮಾಡಲಿದ್ದು ಅಂಬೇಡ್ಕರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸು ಗೊಳಿಸಲು ವಿನಂತಿಸಿದರು
ಬಾಳೂರು ಹೋಬಳಿ ಎಸ್, ಸಿ ಮೋರ್ಚಾ ಅಧ್ಯಕ್ಷ ರಘುಪತಿ ಬಾಳೂರು ಮಾತನಾಡಿ ಸಂವಿಧಾನದ ಮುಖೇನ ಇಡಿ ವಿಶ್ವವೆ ಭಾರತದೆಡೆಗೆ ಕಣ್ಣೆತ್ತಿ ನೋಡುವಂತೆ ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಈ ಸಮಾಜ ಇವರ ಜನುಮ ದಿನವನ್ನು ಪ್ರತಿ ದಿನ ಆಚರಿಸಬೇಕು ಭವ್ಯ ಭಾರತಕ್ಕೆ ಇವರ ಕೊಡುಗೆ ಎಂದೆಂದಿಗೂ ಅಜರಾಮರ ಎಂದರು
ಎಸ್ ಸಿ ಮೋರ್ಚಾ ಅಧ್ಯಕ್ಷ ಸಚಿನ್ ಬಾನಹಳ್ಳಿ ಮಾತನಾಡಿ ಅಂಬೇಡ್ಕರ್ ಅವರ ತತ್ವ ಸಿದ್ದಂತಗಳನ್ನು ತಲುಪಿಸುವ ದೃಷ್ಟಿಯಿಂದ ಮತ್ತು ಭಾರತಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ಕುರಿತ ಆನೇಕ ವಿಚಾರಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಎಲ್ಲಾ ಮೋರ್ಚಾ ಪದಾಧಿಕಾರಿಗಳು ಆಯೋಜನೆ ಮಾಡಿರುವುದಾಗಿ ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಭಾರತೀಯ ಜನತಾ ಪಾರ್ಟಿ ಎಸ್, ಸಿ, ಮೋರ್ಚಾ ಉಪಾಧ್ಯಕ್ಷ ಶರತ್ ಮಾಕೋನಹಳ್ಳಿ ಹಾಗೂ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ರಘು ಉಪಸ್ಥಿತರಿದ್ದರು
