Friday, September 18, 2026
Homeಜಿಲ್ಲಾಸುದ್ದಿMudigere: ರಕ್ತದಾನ ಜೀವ ರಕ್ಷಣೆಯ ಮಹತ್ವದ ಕಾರ್ಯ: ಠಾಣಾಧಿಕಾರಿ ಹರ್ಷವರ್ಧನ್!

Mudigere: ರಕ್ತದಾನ ಜೀವ ರಕ್ಷಣೆಯ ಮಹತ್ವದ ಕಾರ್ಯ: ಠಾಣಾಧಿಕಾರಿ ಹರ್ಷವರ್ಧನ್!

Telegram Group
Join Now

ಮೂಡಿಗೆರೆ: ಸುಗ್ಗಿಬೈಲು ಛತ್ರಮೈದಾನದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 16ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಪಿಎಸ್‌ಐ ಹರ್ಷವರ್ಧನ್ ಅವರು ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ತದಾನ ಜೀವ ರಕ್ಷಣೆಯ ಮಹತ್ವದ ಕಾರ್ಯವಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಯುವಕರು ಹಾಗೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು ಎಂದು ಅವರು ತಿಳಿಸಿದರು.

ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ, ಅಗತ್ಯವಿರುವವರಿಗೆ ನೆರವಾಗುವ ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದರು. ರಕ್ತದಾನ ಮಾಡಿದ ಯುವಕರಿಗೆ ಶ್ರೀ ಮಹಾಗಣಪತಿ ಸೇವಾ ಸಮಿತಿ ಹಾಗೂ ಸುಗ್ಗಿಬೈಲು ಚತ್ರಮೈದಾನದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!