ಶೃಂಗೇರಿ: ಮಲೆನಾಡಿಗೆ ಉರುಳಾಗುತ್ತಿರುವ ಕಸ್ತೂರಿರಂಗನ್ ವರದಿ 7 ನೇ ಕರಡು ಅಧಿಸೂಚನೆ ವಿರೋಧಿಸಿ ಮಲೆನಾಡಿನ ರೈತ ಸಂಘಟನೆಗಳು ಒಟ್ಟಾಗಿ ಹೋರಾಟಕ್ಕಿಳಿದಿದ್ದು, ಸೆಪ್ಟೆಂಬರ್ 21 ರ ಸೋಮವಾರದಂದು ಶೃಂಗೇರಿ ತಾಲ್ಲೂಕು ಬಂದ್‌ಗೆ ಕರೆ ನೀಡಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ.
ಕಸ್ತೂರಿರಂಗನ್ ಹೋರಾಟ ಸಮಿತಿಯು ಅಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ತಾಲ್ಲೂಕಿನಾದ್ಯಂತ ಸ್ವಯಂಪ್ರೇರಿತ ಬಂದ್‌ಗೆ ಕರೆಕೊಟ್ಟಿದ್ದು,ಎಲ್ಲಾ ಸಾರ್ವಜನಿಕರು ಅಂಗಡಿಮುಂಗಟ್ಟು,ಶಾಲಾ ಕಾಲೇಜು,ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಿ ಬಂದ್‌ಗೆ ಸಂಪೂರ್ಣ ಸಹಕಾರ ನೀಡಿ ಎಲ್ಲರೂ ಪ್ರತಿಭಟನಾ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆ.
ಶೃಂಗೇರಿಯ ಸ್ವಾಗತ ಗೋಪುರದಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದ್ದು ಎಲ್ಲಾ ರೈತ ಬಾಂಧವರು, ಸಾರ್ವಜನಿಕರು ಪಾಲ್ಗೊಳ್ಳುವಂತೆ ಸಮಿತಿ ಮನವಿ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಅಧ್ಯಕ್ಷರಾದ ಕಾನೊಳ್ಳಿ ಚಂದ್ರಶೇಖರ್,ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣರಾವ್, ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿಯ ರಂಜಿತ್ ಶೃಂಗೇರಿ,ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ತಾಲ್ಲೂಕು ಅಧ್ಯಕ್ಷರಾದ ಶಂಕ್ರಪ್ಪ ಗೇರ್‌ಬೈಲ್, ಕಾರ್ಯಾಧ್ಯಕ್ಷ ನರೇಂದ್ರ ಹೆಗ್ಡೆ,ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸದಸ್ಯರಾದ ಸಂತೋಷ್ ಖಾಳ್ಯ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ರಮೇಶ್ ಭಟ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಭರತ್ ಗಿಣಕಲ್,ಬಿಜೆಪಿ ವಕ್ತಾರರಾದ ದಿನೇಶ್ ಅಂಗುರ್ಡಿ,ಮುಖಂಡರಾದ ರಮೇಶ್ ಕಚ್ಚೋಡಿ,ಸಮಾಜಮುಖಿ ಹೋರಾಟಗಾರ ಆನೆಗುಂದ ಗೋಪಾಲ್,ರೈತ ಮುಖಂಡರಾದ ಪೂರ್ಣೇಶ್ ಹಾಗೂ ಇತರರು ಹಾಜರಿದ್ದರು.
