Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ: ಮೂಲ ಭೂತ ಸೌಕರ್ಯ ಒದಗಿಸಲು ತುದಿಯಾಲ ಗ್ರಾಮಸ್ಥರಿಂದ ಒತ್ತಾಯ

ಮೂಡಿಗೆರೆ: ಮೂಲ ಭೂತ ಸೌಕರ್ಯ ಒದಗಿಸಲು ತುದಿಯಾಲ ಗ್ರಾಮಸ್ಥರಿಂದ ಒತ್ತಾಯ

Telegram Group
Join Now

ಮೂಡಿಗೆರೆ: ಮಾಕೋನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದ ತುದಿಯಾಲ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಅನೇಕ ವರ್ಷಗಳಿಂದ ಕೊಳಚೆ ನೀರನ್ನು ಕುಡಿದು ಅನಾರೋಗ್ಯ ಇತರೆ ಮತ್ತು ಚರ್ಮ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಕೊಳಚೆ ನೀರನ್ನು ಕುಡಿಯುತ್ತಿರುವ ಗ್ರಾಮಸ್ಥರು

ಇಂದು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಾಮಸ್ಥರೆಲ್ಲ ನಮಗೆ ಕೊಳವೆ ಭಾವಿಯನ್ನು ಮಾಡಿಸಿ ಕೊಡಬೇಕೆಂದು. ಮಾಕೋನಹಳ್ಳಿ ಗ್ರಾಮ ಪಂಚಾಯತಿಗೆ ಒತ್ತಾಯಿಸಿ ಮನವಿ ಮಾಡಲಾಯಿತು‌

ಈ ಹಿಂದೆ ಎಷ್ಟು ಮನವಿ ಸಲ್ಲಿಸಿದರು ಕೂಡ ಗ್ರಾಮ ಪಂಚಾಯಯಿಂದ ಯಾವುದೇ ರೀತಿ ಸ್ಪಂದನೆ ಇಲ್ಲದಿರುವುದರಿಂದ ಪ್ರತಿಭಟನೆ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಡಿಎಸ್ ಎಸ್ ಅಂಬೇಡ್ಕರ್ ಧ್ವನಿ ಸಂಘಟನೆ ಮೂಡಿಗೆರೆ ತಾಲೂಕು ಘಟಕ ಇವರ ಗಮನಕ್ಕೆ ತಂದಿದ್ದು ಈ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಹರೀಶ್ ಮಾತನಾಡಿ ನಾವು ಸುಮಾರು 40 ಪ.ಜಾ ಕುಟುಂಬಗಳು ಇದ್ದು ಇಲ್ಲಿಯವರೆಗೆ ಯಾವುದೇ ರೀತಿಯ ಮೂಲ ಸೌಕರ್ಯ ಗಳಿಲ್ಲದೆ ಪರದಾಡುವಂತ ಪರಿಸ್ಥಿತಿ ಬಂದಿದೆ ಮೂಲ ಸೌಕರ್ಯ ಒದಗಿಸದೆ ಇದ್ದಲಿ ಪ್ರತಿಭಟನೆ ಮಾಡುವುದಗಿ ತಿಳಿಸಿದರು.

ಈ ಸಂದರ್ಭದಲ್ಲಿ ಡಿಎಸ್ ಎಸ್ ತಾಲೂಕು ಗೌರವ ಅಧ್ಯಕ್ಷ ರಮೇಶ್ ಬಹುಜನ್, ವೀಣೆಶ್, ಶಿವ, ಅಣ್ಣಪ್ಪ, ಕೆಂಚಪ್ಪ, ಶಿವರಾಮ್, ವೆಂಕಟೇಶ್,. ಸುರೇಂದ್ರ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments