Monday, May 18, 2026
Homeಜಿಲ್ಲಾಸುದ್ದಿಮೂಡಿಗೆರೆ: ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ಇಂಪನಾ ಅವರಿಗೆ ಶುಭನಗರ ಗ್ರಾಮಸ್ಥರಿಂದ ಸನ್ಮಾನ

ಮೂಡಿಗೆರೆ: ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ಇಂಪನಾ ಅವರಿಗೆ ಶುಭನಗರ ಗ್ರಾಮಸ್ಥರಿಂದ ಸನ್ಮಾನ

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಹೋಬಳಿ ಜನ್ನಪುರದ ಶುಭನಗರ ವಾಸಿ ಶ್ರೀಮತಿ ರೇಣುಕಾ ಮತ್ತು ಶರತ್ ಅವರ ಮಗಳಾದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಇಂಪಾನ ಅವರನ್ನು ಗ್ರಾಮಸ್ಥರು ಇವರ ಸಾಧನೆ ಗುರುತಿಸಿ ಭಾರತಾಂಬೆ ಭಾವಚಿತ್ರ ನೀಡಿ ಸನ್ಮಾನಿಸಿ ಗೌರವಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅವಿನಾಶ್ ಮಾತನಾಡಿ ತಾಲೂಕಿನ ಗಡಿಭಾಗದ ಗ್ರಾಮೀಣ ಪ್ರದೇಶದಲ್ಲಿಯೂ ವಿದ್ಯಾರ್ಥಿಗಳು ಅದ್ಭುತ ಪ್ರತಿಭೆ ಮೆರೆದಿದ್ದು, ಅವರಿಗೆ ಸರಿಯಾದ ಶಿಕ್ಷಣ, ಸಂಸ್ಕಾರ ಮತ್ತು ಮಾರ್ಗದರ್ಶನ ದೊರೆತರೆ ರಾಜ್ಯ ಮಟ್ಟದ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಗ್ರಾಮದ ಇಂಪನಾ ಅವರ ಮನೆಗೆ ಭೇಟಿ ನೀಡಿ ಈಚೆಗೆ ನಡೆದ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಗ್ರಾಮಸ್ಥರು ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಚಿನ್ನಿಗ ಸರ್ಕಾರಿ ಶಾಲೆಯ ಉತ್ತಮ ಶಿಕ್ಷಕ ವೃಂದ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಇಂತಹ ಸಾಧನೆಗಳಿಗಳಿಗೆ ಶಿಕ್ಷಕರ ಕಾರ್ಯವೈಖರಿ ಮೆಚ್ಚುವಂತದ್ದು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿ ನಡೆಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಹಳ್ಳಿ ಪ್ರದೇಶದ ವಿದ್ಯಾರ್ಥಿನಿ 87 % ಗಳಿಸಿರುವುದು ಹೆಮ್ಮೆಯ ಸಂಗತಿ. ಶಾಲೆಯು ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ಫಲಿತಾಂಶ ದಾಖಲಿಸುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಬದ್ಧತೆಯನ್ನು ತೋರಿಸುತ್ತದೆ. ಎಂದರು

‘ಪ್ರತಿಯೊಬ್ಬರೂ ಸುಖ, ಶಾಂತಿ ಮತ್ತು ನೆಮ್ಮದಿ ಪಡೆಯಬೇಕಾದರೆ ಸತ್ಸಂಗದ ಮಾರ್ಗದಲ್ಲಿ ನಡೆಯಬೇಕು. ಜ್ಞಾನಕ್ಕೆ ಇಡೀ ಜಗತ್ತೇ ತಲೆಬಾಗುತ್ತದೆ ಎಂಬ ಮಾತಿನಂತೆ ವಿದ್ಯಾರ್ಥಿಗಳು ಜ್ಞಾನದ ರತ್ನಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶ್ರೀಮತಿ ಕಸ್ತೂರಮ್ಮ,ಶ್ಯಾಮ್ ಉಗ್ಗೇಹಳ್ಳಿ, ಅನಿಲ್ ಹಂತುರು,ಶ್ರೀಮತಿ ಅನು, ಬಜರಂಗದಳ ತಾಲ್ಲೂಕು ಅಧ್ಯಕ್ಷ ಸಂತೋಷ ಶುಭನಗರ, ಮೋನಿಷಾ ಅವಿನಾಶ್, ವಿನೋದ್,ಅಶ್ವಿನಿ ಶ್ಯಾಮ್ ಗೌಡ,ಅಭಿ ಗೌಡ,ಸುಜಾತ, ಪ್ರಗತಿ,ಸೇರಿದಂತೆ ಆನೇಕರು ಉಪಸ್ಥಿತರಿದ್ದರು

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!