Sunday, August 16, 2026
Homeಕ್ರೈಮ್ಮೂಡಿಗೆರೆ: ದತ್ತು ಗ್ರಾಮ ದಾರದಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದೆ ರೋಗಿ ನರಳಾಟ: ಸ್ಥಳೀಯರು ತೀವ್ರ...

ಮೂಡಿಗೆರೆ: ದತ್ತು ಗ್ರಾಮ ದಾರದಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದೆ ರೋಗಿ ನರಳಾಟ: ಸ್ಥಳೀಯರು ತೀವ್ರ ಆಕ್ರೋಶ

Telegram Group
Join Now

ಮೂಡಿಗೆರೆ: ತಾಲೂಕಿನ ದತ್ತು ಗ್ರಾಮವಾದ ದಾರದಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂತಾ ಅಮಾನವೀಯ ಘಟನೆ ನಡೆದಿದ್ದು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಇಲ್ಲದೆ ರೋಗಿಯೊಬ್ಬರು ಪರಿತಪಿಸುವಂತ ಸ್ಥಿತಿ ಉಂಟಾಗಿದ್ದು ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ಪೋಷಕರು ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷ ಜಂತುಯೊಂದು ಕಚ್ಚಿ ಪ್ರಥಮ ಚಿಕಿತ್ಸೆಗೆ ಬಂದ ರೋಗಿ ವಿರೇಶ್ (17) ಈ ವೇಳೆ ಆಸ್ಪತ್ರೆಯಲ್ಲಿ ರಜೆ ಇಲ್ಲದೆ ಇದ್ರೂ ಚಿಕಿತ್ಸೆ ನೀಡದೆ ಸಿಬ್ಬಂದಿಗಳು ಚಕ್ಕರ್ ಹಾಕಿದ್ದು ವೈದ್ಯರು ಇಲ್ಲಾ ಸಿಬ್ಬಂದಿಗಳು ಇಲ್ಲದೆ ಪರದಾಟ ಅನುಭವಿಸುವಂತಾಗಿದೆ.

ಸಿಬ್ಬಂದಿಗಳು ಇಲ್ಲದೆ ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ರೋಗಿಯನ್ನು ವೈಯಕ್ತಿಕ ವಾಹನದಲ್ಲಿ ಕರೆದೊಯ್ಯಲಾಗಿದ್ದು ವಿಷ ಜಂತುವಿನಿಂದ ಕಚ್ಚಿಸಿಕೊಂಡ ಬಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ

ಇದು ಆರೋಗ್ಯ ಕೇಂದ್ರ ಸಿಬ್ಬಂದಿಗಳ ಸಂಪೂರ್ಣ ನಿರ್ಲಕ್ಷ್ಯ ಎಂದು ಸ್ಥಳೀಯರು ದೂರಿದ್ದು ವೈದ್ಯ ಹಾಗೂ ಸಿಬ್ಬಂದಿಗಳು ಮನಬಂದಂತೆ ಕಾರ್ಯ ನಿರ್ವಹಿಸುವುದರ ವಿರುದ್ದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಾರದಹಳ್ಳಿ ಆರೋಗ್ಯ ಕೇಂದ್ರ ಮನಬಂದಂತೆ ಕಾರ್ಯ ನಿರ್ವಹಿಸುತ್ತಿರುವುದು ಬೇಸರ ತಂದಿದೆ ಚಿಕಿತ್ಸೆ ನೀಡಬೇಕಾದ ಸಿಬ್ಬಂದಿಗಳು ಗೈರಾಗಿ ಕಾರ್ಯ ನಿರ್ವಹಿಸದ ಅವರನ್ನು ಅಮಾನತು‌ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ ಹಾಗೆ ಈ ಘಟನೆ ಬಳಿಕ ಸಿಬ್ಬಂದಿಗಳು ದೂರವಾಣಿ ಕರೆಗೆ ಅಲಭ್ಯರಾಗಿ ಕಳ್ಳರಂತೆ ವರ್ತಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಏನು ಕ್ರಮ ಕೈಗೊಳ್ಳುತ್ತಾರೆಂದು ಮುಂದೆ ಕಾದುನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments