Thursday, July 30, 2026
Homeಕ್ರೈಮ್ಮೂಡಿಗೆರೆ : ಬೀಗ ಹಾಕಿದ್ದ ಮನೆಗೆ ನುಗ್ಗಿ ಕಳ್ಳರ ಕನ್ನ: ಸಿಸಿಟಿವಿ ಕ್ಯಾಮೆರಾಗಳು ಧ್ವಂಸ!

ಮೂಡಿಗೆರೆ : ಬೀಗ ಹಾಕಿದ್ದ ಮನೆಗೆ ನುಗ್ಗಿ ಕಳ್ಳರ ಕನ್ನ: ಸಿಸಿಟಿವಿ ಕ್ಯಾಮೆರಾಗಳು ಧ್ವಂಸ!

Telegram Group
Join Now

ಮೂಡಿಗೆರೆ : ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ನಗದು ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೂಡಿಗೆರೆ ತಾಲೂಕಿನ ಗೋಣಿಬೀಡಿನ ಮಂಡಿ ಮನೆ ನಿವಾಸಿ ಲಕ್ಷ್ಮಣೇಗೌಡ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಲಕ್ಷ್ಮಣೇಗೌಡ ಅವರು ತಮ್ಮ ಹೆಂಡತಿ ರಾಧಾ ಅವರೊಂದಿಗೆ ಮೇ 30ರಂದು ಮಧ್ಯಾಹ್ನ ಸಕಲೇಶಪುರದಲ್ಲಿರುವ ಮಗಳ ಮನೆಗೆ ತೆರಳಿದ್ದರು. ಜೂನ್ 1ರಂದು ಬೆಳಿಗ್ಗೆ ಮನೆಗೆ ವಾಪಸ್ ಬಂದು ನೋಡಿದಾಗ ಕಳ್ಳತನ ನಡೆದಿರುವುದು ದೃಢಪಟ್ಟಿದೆ.

ಖದೀಮರು ಮನೆಯ ಮುಂಬಾಗಿಲನ್ನು ಮುರಿದು ಒಳನುಗ್ಗಿದ್ದಲ್ಲದೆ, ಸಿಕ್ಕಿಬೀಳುವ ಭಯದಿಂದ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ರೂಮಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಹಣ, 25 ಸಾವಿರ ರೂಪಾಯಿ ಮೌಲ್ಯದ ಎರಡು ಕೈ ಗಡಿಯಾರಗಳು (ವಾಚ್) ಹಾಗೂ 10 ಸಾವಿರ ರೂಪಾಯಿ ಬೆಲೆಯ ಒಂದು ಆಂಪ್ಲಿಫೈಯರ್ ಸೇರಿ ಒಟ್ಟು 45 ಸಾವಿರ ರೂಪಾಯಿ ಮೌಲ್ಯದ ಸ್ವತ್ತನ್ನು ದೋಚಿ ಪರಾರಿಯಾಗಿದ್ದಾರೆ.

ಇಷ್ಟೇ ಅಲ್ಲದೆ ಮನೆಯಲ್ಲಿದ್ದ ಎರಡು ಸ್ಪೀಕರ್ ಹಾಗೂ ಜನರೇಟರ್ ಅನ್ನು ಸಹ ಕಳ್ಳತನ ಮಾಡಲು ಯತ್ನಿಸಿದ್ದು, ಅವುಗಳನ್ನು ಮನೆಯಿಂದ ಹೊರಭಾಗಕ್ಕೆ ತಂದು ಇಟ್ಟುಕೊಂಡಿರುವುದು ಕಂಡುಬಂದಿದೆ. ಆದರೆ ಯಾವುದೋ ಕಾರಣಕ್ಕೆ ಅವುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜೂನ್ 3ರಂದು ಲಕ್ಷ್ಮಣೇಗೌಡ ಅವರು ನೀಡಿದ ದೂರಿನನ್ವಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments