Thursday, July 30, 2026
Homeಜಿಲ್ಲಾಸುದ್ದಿಡಿಕೆಶಿ ಮೊದಲ‌ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯ ಯುವ ಕರ್ನಾಟಕ ನಿರ್ಮಾಣಕ್ಕೆ ಮಾದರಿ: ಹೆಚ್.ಎಸ್ ಶಿವಕುಮಾರ್

ಡಿಕೆಶಿ ಮೊದಲ‌ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯ ಯುವ ಕರ್ನಾಟಕ ನಿರ್ಮಾಣಕ್ಕೆ ಮಾದರಿ: ಹೆಚ್.ಎಸ್ ಶಿವಕುಮಾರ್

Telegram Group
Join Now

ಚಿಕ್ಕಮಗಳೂರು: ಡಿ.ಕೆ ಶಿವಕುಮಾರ್ ಅವರ ಮೊದಲ‌ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯಗಳು ಯುವ ಕರ್ನಾಟಕ ನಿರ್ಮಾಣಕ್ಕೆ ಮಾದರಿಯಾಗಲಿದೆ ಎಂದು ಕೆಪಿಸಿಸಿ ಸಂಶೋಧನಾ ವಿಭಾಗದ ಜಿಲ್ಲಾ ಅಧ್ಯಕ್ಷ ಹೆಚ್.ಎಸ್ ಶಿವಕುಮಾರ್ ಅಭಿಪ್ರಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮೊದಲ ಸಚಿವ ಸಂಪುಟದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವ್ಯವಸ್ಥೆ ಕಲ್ಪಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅನುಕೂಲವಾಗುವುದರ ಜೊತೆಗೆ ರೈತಾಪಿ ವರ್ಗದ ಪೋಷಕರಿಗೆ ಆರ್ಥಿಕ ಹೊರೆ ತಗ್ಗಲಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ.

ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಮುಂದಾಗಿರುವುದು ಯುವ ಜನತೆಯ ಹೊಸ ಪರ್ವ ಆರಂಭವಾಗಲಿದೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನೆಹರು ಯುವ ಕೇಂದ್ರದ ಮಾದರಿಯಲ್ಲಿ ಯುವ ನಾಯಕತ್ವದ ಬೆಳವಣಿಗೆಗೆ ಹಾಗೂ ಯುವಕ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ.ಇದರಿಂದಾಗಿ ಯುವ ಕರ್ನಾಟಕ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.

ನರೇಂದ್ರ ಮೋದಿಯವರು ಚುನಾವಣೆ ಪೂರ್ವದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಜನತೆಗೆ ಸುಳ್ಳು ಹೇಳಿದ್ದರು. ಆದರೆ ನಮ್ಮ ರಾಜ್ಯ ಸರ್ಕಾರ ಇದೀಗ
ಯುವ ಉದ್ಯೋಗ ಸೇತು ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆ ಮಾಡುವ ಮೂಲಕ ಉದ್ಯೋಗ ಹರಸುವ ಯುವ ಸಮುದಾಯಕ್ಕೆ ಉದ್ಯೋಗ ದೊರೆಕಿಸಿಕೊಡುವ ಮೂಲಕ ಶ್ರೀ ಸಿದ್ದರಾಮಯ್ಯನವರ ಮಾದರಿಯಲ್ಲಿಯೇ ನೂತನ ಮುಖ್ಯಮಂತ್ರಿಗಳಾದ ಡಿಕೆಶಿಯವರು ಜನಪರವಾದ ಆಡಳಿತವನ್ನು ನೀಡಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments