Thursday, July 30, 2026
Homeಜಿಲ್ಲಾಸುದ್ದಿಕೊಪ್ಪ: ಡಿಕೆಶಿ ಸಿಎಂ ಹಿನ್ನೆಲೆ, ಭಂಡಿಗಡಿ ಕಾಂಗ್ರೆಸ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೋಟ್...

ಕೊಪ್ಪ: ಡಿಕೆಶಿ ಸಿಎಂ ಹಿನ್ನೆಲೆ, ಭಂಡಿಗಡಿ ಕಾಂಗ್ರೆಸ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೋಟ್ ಬುಕ್, ಪೆನ್ ವಿತರಣೆ

Telegram Group
Join Now

ಕೊಪ್ಪ: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಯುಕ್ತ ಭಂಡಿಗಡಿ ಕಾಂಗ್ರೆಸ್ ವತಿಯಿಂದ ಭಂಡಿಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೋಟ್ ಬುಕ್, ಪೆನ್ ವಿತರಿಸಿ ಸಿಹಿ ಹಂಚಲಾಯಿತು.

ಈ ವೇಳೆ ಮಾತನಾಡಿದ ಕೊಪ್ಪ ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುನಿಲ್ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು ರಾಜ್ಯಕ್ಕೆ ಹೊಸ ಕಳೆ ಬಂದಂತಾಗಿದೆ. ಮುಖ್ಯಮಂತ್ರಿಯಾಗುತ್ತಿದ್ದಂತೆ ವಿಶೇಷವಾಗಿ ಶಾಲಾ ಕಾಲೇಜು ಮಕ್ಕಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿರುವುದು ಅವರಿಗೆ ವಿದ್ಯಾರ್ಥಿಗಳ ಮೇಲೆ ಇರುವ ಕಾಳಜಿಯನ್ನು ತೋರಿಸಿದೆ. ಮುಂದಿನ ದಿನಗಳಲ್ಲೂ ಡಿ ಕೆ ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಇನ್ನಷ್ಟು ಯೋಜನೆ ನೀಡಲಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಭಂಡಿಗಡಿ ಪಂಚಾಯತಿ ಘಟಕದ ಅಧ್ಯಕ್ಷರಾದ ಸಮರ್ಥ ಹೆಬ್ಬರಡಿ, ಕೊಪ್ಪ ತಾಲೂಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಸುನಿಲ್ ಭಂಡಿಗಡಿ. ಪ್ರಶಾಂತ್ ಹೊಸೂರು, ನಿಜಾಮುದ್ದೀನ್. ವಿಜಯ್ ಕುಮಾರ್ . ಪ್ರೇಮ್ ಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments