Monday, July 27, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ: ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ: ಸಿ.ಟಿ.ರವಿ

ಚಿಕ್ಕಮಗಳೂರು: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ: ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ: ಸಿ.ಟಿ.ರವಿ

Telegram Group
Join Now

ಚಿಕ್ಕಮಗಳೂರು : ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು .. ಅವರು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಡಿಕೆಶಿ ಸಂಪುಟದ ಮೊದಲ ವಿಕೆಟ್ ರಾಜೀನಾಮೆ ಮೂಲಕ ಪತನವಾಗಿದೆ ಸಂಪುಟ ದರ್ಜೆಯ ಸಚಿವ, ಹಿರಿಯ ಕಾಂಗ್ರೆಸ್ಸಿಗ ರಾಜೀನಾಮೆ ನೀಡಿದ್ದಾರೆ ಮೊದಲ ಸಂಪುಟ ಸಭೆಯನ್ನ ಸಿಕ್ಸರ್ ಹೊಡೆದ ಶಿವಕುಮಾರ್ ಎಂದು ಬಿಂಬಿಸಿದ್ರು ಸಿಕ್ಸರ್ ಹೊಡೆದ್ರು, ಸಿಕ್ಸರ್ ಜೊತೆ ಹಿಟ್ ವಿಕೆಟ್ ಆಗಿದೆ ಇದು ಆಂತರಿಕವಾಗಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಸೂಚಿಸುತ್ತೆ ಇದು ಭವಿಷ್ಯದ ಬೆಳವಣಿಗೆಗಳನ್ನ ಸೂಚಿಸುತ್ತೆ ನಮ್ಮ ಆತಂಕ ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ತಿಳಿಸಿದರು.

ಹಾಗೆ ಕೊಟ್ಟ ಮಾತು ತಪ್ಪಿದ್ದಕ್ಕೆ ರಾಜೀನಾಮೆ ಸಲ್ಲಿಸಿದ್ರೆ ಯಾರು ಈ ಯಾರಿಗೆ ಮಾತು ಕೊಟ್ಟಿದ್ದರು ನಮಗೆ ಗೊತ್ತಿಲ್ಲ ಜನರಿಗೆ ಗೊತ್ತಾಗ್ತಿರೋದು ರಾಜೀನಾಮೆ, ಆಂತರಿಕ ಬೇಗುದಿ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹಣಕಾಸಿನ ಪರಿಸ್ಥಿತಿಗೆ ಕನ್ನಡಿ ಹಿಡಿದಿರೋದು ರೆಡ್ಡಿ ರಾಜೀನಾಮೆ ಇವೆಲ್ಲಾ ಭವಿಷ್ಯದ ಮುನ್ಸೂಚನೆ ಕೊಡ್ತಿದ್ದಾವೆ ಎಂದು ವ್ಯಂಗ್ಯವಾಡಿದ್ರು.

ಅದೇ ರೀತಿ ಮುಂದುವರೆದು ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂದು ಭಾವಿಸುವಂತಿಲ್ಲ, ಹೇಗೆ ಸಾಧ್ಯ ಇನ್ನು ಪೂರ್ಣ ಪ್ರಮಾಣದ ಸಂಪುಟ ರಚನೆಯೇ ಆಗಿಲ್ಲ ಹಿರಿಯ ಸಚಿವರಲ್ಲೇ ಈ ರೀತಿಯ ಆಂತರಿಕ ಬೇಗೋದಿ ಇರುವಾಗ ಪೂರ್ಣ ಪ್ರಮಾಣದಲ್ಲಿ ರಚನೆಯಾದಾಗ ಸ್ಫೋಟವಾಗುತ್ತೆ ಬಣ ರಾಜಕೀಯ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ ಅದು ಬೇರೆ ಪ್ರಶ್ನೆ ಆ ಬಣ ರಾಜಕೀಯ ರಾಜ್ಯದ ಹಿತವನ್ನ ಮೀರಬಾರದು, ಅವರ ಪಕ್ಷದ ಹಿತವನ್ನೂ ಮೀರಬಾರದು ಆ ಸ್ಪರ್ಧೆ ರಾಜಕೀಯ ಹಿತವನ್ನ ಮೀರಬಾರದು, ಮೀರಿದರೆ ರಾಜ್ಯ-ಆಡಳಿತದ ಮೇಲೆ ಪರಿಣಾಮ ಬೀರುತ್ತೆ ಎಂದು ಸಿ.ಟಿ.ರವಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments