Saturday, August 8, 2026
Homeಜಿಲ್ಲಾಸುದ್ದಿಮೂಡಿಗೆರೆ : ಹೃದಯಾಘಾತಕ್ಕೆ ಯುವಕ ಸುಮಂತ್ ಸಾವು!

ಮೂಡಿಗೆರೆ : ಹೃದಯಾಘಾತಕ್ಕೆ ಯುವಕ ಸುಮಂತ್ ಸಾವು!

Telegram Group
Join Now

ಮೂಡಿಗೆರೆ: ರಾಜ್ಯದಲ್ಲಿ ಯುವಜನತೆಯ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತಿಬೈಲ್ ಹೊಸಕೆರೆ ಎಂಬಲ್ಲಿ ಇಂದು ಬೆಳಗ್ಗೆ 8.30ಕ್ಕೆ ಹೃದಯಾಘಾತ ದಿಂದಾಗಿ ಸುಮಂತ್ ಅಸುನಿಗಿರುತ್ತಾರೆ.

ಭಾರತಿಬೈಲ್ ಸರ್ಕಲ್ ನಲ್ಲಿ ಕುಸಿದ ಯುವಕನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯದಲ್ಲೇ ಜೀವ ಹೋಗಿದೆ ಎಂದು ಸ್ಥಳೀಯರಾದ ಸ್ವೀಕಾರ್ ತಿಳಿಸಿದ್ದಾರೆ

ಬಡ ಕುಟುಂಬದ ಯುವಕನ ಸಾವಿಗೆ ಗ್ರಾಮಸ್ಥರು ಗೆಳೆಯರ ಬಳಗ ಕಂಬಿನಿ ಮಿಡಿದಿದ್ದಾರೆ . ಕಳೆದ ಒಂದು ವರ್ಷದ ಹಿಂದೆ ಇವರ ತಾಯಿ ಅಸುನಿಗಿದ್ದು ಕುಟುಂಬಕ್ಕೆ ಆಧಾರ ವಾಗಿದ್ದ 28 ವರ್ಷದ ಯುವಕ ಹೃದಯಘಾತ ದಿಂದ ಮೃತಪಟ್ಟಿದ್ದಾನೆ.

ಇನ್ನೊಂದೆಡೆಯಲ್ಲಿ,ಸರಣಿ ಹೃದಯಾಘಾತ ಸುದ್ದಿಗಳಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments