Wednesday, July 15, 2026
Homeಕ್ರೈಮ್ಎನ್.‌ ಆರ್.ಪುರ: ಕಾರು - ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ: ಪತ್ನಿ ಎದುರಲ್ಲೇ ಪತಿ ಸಾವು!

ಎನ್.‌ ಆರ್.ಪುರ: ಕಾರು – ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ: ಪತ್ನಿ ಎದುರಲ್ಲೇ ಪತಿ ಸಾವು!

Telegram Group
Join Now

ಎನ್.‌ ಆರ್.ಪುರ: ರಸ್ತೆ ಅಪಘಾತದಲ್ಲಿ ಬೈಕ್‌ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎನ್.‌ ಆರ್.ಪುರ ತಾಲೂಕಿನ ಕಿಚ್ಚಬ್ಬಿ ಸಮೀಪ ನಡೆದಿದೆ.

ಹೌದು.. ಬಾರಂದೂರು ಗ್ರಾಮದ ನಿವಾಸಿ ನಾಗರಾಜು ಮೃತ ವ್ಯಕ್ತಿಯಾಗಿರುತ್ತಾರೆ. ಅವರ ಪತ್ನಿ ಸುನಂದ ಎಂಬುವರಗೆ ತೀವ್ರ ಅಪಘಾತವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಂಪತಿ ತಮ್ಮ ಊರಿಗೆ ಹೋಗಲು ಮಾಗುಂಡಿಯಿಂದ ಬೈಕ್‌ ನಲ್ಲಿ ಹೊರಟ್ಟಿದ್ದರು. ಈ ವೇಳೆ ಕಿಚ್ಚಬ್ಬಿ ಸಮೀಪಿಸುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಕಾರು ಚಾಲಕನ ಅತೀವೇಗ ಮತ್ತು ಅಜಾಗರುಕತೆಯಿಂದ ಬೈಕ್‌ʼಗೆ ಡಿಕ್ಕಿ ಹೊಡೆದಿದ್ದಾನೆ.

ಅಪಘಾತದ ರಭಸಕ್ಕೆ ದಂಪತಿ ರಸ್ತೆಯಲ್ಲೇ ಬಿದ್ದಿದ್ದು ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯ ಪತಿ ಸಾವನ್ನಪ್ಪಿದ್ದಾರೆ. ಪತ್ನಿಗೂ ಗಂಭೀರ ಗಾಯಗಳಾಗಿವೆ.

ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಾಲಕನ ವಿರುದ್ಧ ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments