Thursday, October 1, 2026
Homeಜಿಲ್ಲಾಸುದ್ದಿಶಿವಮೊಗ್ಗ : ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಕೆಎಸ್‌ಆರ್‌ಟಿಸಿ ಬಸ್: ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ...

ಶಿವಮೊಗ್ಗ : ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಕೆಎಸ್‌ಆರ್‌ಟಿಸಿ ಬಸ್: ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಪ್ರಯಾಣಿಕರು

Telegram Group
Join Now

ಶಿವಮೊಗ್ಗ: ಶಿವಮೊಗ್ಗದಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡೀಸೆಲ್ ಖಾಲಿಯಾಗಿ ನಡುರಸ್ತೆಯಲ್ಲೇ ನಿಂತ ಘಟನೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿ ನಡೆದಿದೆ. ಮಾರ್ಗ ಮಧ್ಯೆ ಬಸ್ ನಿಂತ ಪರಿಣಾಮ ಪ್ರಯಾಣಿಕರು ಪರದಾಡುವಂತಾಯ್ತು.

ಬಸ್ನಿಂದ ಇಳಿದ ಪ್ರಯಾಣಿಕರು ಹೇಗೆ ಹೋಗೋದು ಅಂತ ಕಂಗಾಲಾಗಿ ನಿಂತಿದ್ರು. ಹೀಗೆ ಏಕಾಏಕಿ ರೋಡ್ ಮಧ್ಯೆ ಬಸ್ ನಿಂತ್ರೆ ಹೇಗೆ ಅಂತ ಪ್ರಯಾಣಿಕರು ಚಾಲಕನನ್ನ ತರಾಟೆಗೆ ತೆಗೆದುಕೊಂಡ್ರು. ಅಲ್ಲದೇ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ರು.

ನಂತರ  ಸ್ಥಳೀಯ ಜನರ ಸಹಾಯದಿಂದ ಬೇರೆ ಬಸ್ ನಲ್ಲಿ ಪ್ರಯಾಣಿಕರು ಪ್ರಯಾಣ ಬೆಳೆಸಿದ್ರು. ಇನ್ನು ಈ ಮಾರ್ಗದಲ್ಲಿ ಪದೇ ಪದೇ ಹೀಗೆಯೇ ಡೀಸೆಲ್ ಖಾಲಿಯಾಗಿ ಬಸ್ ನಿಲ್ಲುತ್ತಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!