Saturday, May 30, 2026
Homeಕ್ರೈಮ್ಸಿಸಿ ಕ್ಯಾಮೆರಾ ಅಳವಡಿಸಿ ರಸ್ತೆ ಬದಿ ತ್ಯಾಜ್ಯ ಬಿಸಾಕುವರ ಮೇಲೆ ಕ್ರಮ ಕೈಗೊಳ್ಳಲು ಪೀಸ್ &...

ಸಿಸಿ ಕ್ಯಾಮೆರಾ ಅಳವಡಿಸಿ ರಸ್ತೆ ಬದಿ ತ್ಯಾಜ್ಯ ಬಿಸಾಕುವರ ಮೇಲೆ ಕ್ರಮ ಕೈಗೊಳ್ಳಲು ಪೀಸ್ & ಅವರ್ನೆಸ್ ಸಂಘಟನೆ ಆಗ್ರಹ

ಮೂಡಿಗೆರೆ:ತಾಲ್ಲೂಕಿನ ಪ್ರಮುಖ ರಸ್ತೆ ಬದಿಗಳಲ್ಲಿ ತ್ಯಾಜ್ಯ ಬಿಸಾಕುತ್ತಿರುವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಎಂದು ಪೀಸ್ ಅಂಡ್ ಅವರ್ನೆಸ್ ಸಂಘ ಒತ್ತಾಯಿಸಿದೆ

ಈ ವಿಚಾರವಾಗಿ ಹಲವು ಗ್ರಾಮ ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ದರೂ ಗ್ರಾಮ ಪಂಚಾಯಿತಿಯವರಾಗಲಿ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಟ್ಟಣದ ಪ್ರಮುಖ ವೃತ್ತಗಳಾದ ಬಸ್ ನಿಲ್ದಾಣ, ಸಂತೆ ಸರ್ಕಲ್, ಹ್ಯಾಂಡ್ ಪೋಸ್ಟ್ ನಾಡಪ್ರಭು ಕೆಂಪೇಗೌಡರ ಸರ್ಕಲ್, ಮುಂತಾದ ಕಡೆಗಳ ರಸ್ತೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಪೀಸ್ ಅಂಡ್ ಅವರ್ನೆಸ್ ಸಂಘಟನೆ ಸದಸ್ಯರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಪಟ್ಟಣದಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗುತ್ತಿದೆ. ಮೂಡಿಗೆರೆ ಪ್ರವಾಸಿ ಸ್ಥಳವಾಗಿದ್ದು ಬೆಂಗಳೂರು,ತುಮಕೂರು,ವಿವಿಧ ಜಿಲ್ಲೆಗಳಿಂದಲ್ಲದೆ ವಿವಿಧ ರಾಜ್ಯಗಳಿಂದ ಪ್ರತಿನಿತ್ಯ ಹತ್ತಾರು ಪ್ರವಾಸಿ ವಾಹನಗಳು ಸಂಚರಿಸುತ್ತವೆ. ನೂರಾರು ಜನರು ಬಂದು ಹೋಗುತ್ತಿದ್ದೂ ವಾಹಣಗಳಿಂದ ತ್ಯಾಜ್ಯವನ್ನು ರಸ್ತೆ ಬದಿಗಳಲ್ಲಿ ಬಿಸಾಕುತ್ತಿದ್ದೂ ರಾಶಿ ರಾಶಿ ಕಸದ ಸಂಗ್ರಹಣೆ ಆಗುತ್ತಿದ್ದೂ ಸಿಸಿ ಕ್ಯಾಮೆರಾ ಅಳವಡಿಸಿ ಇಂತವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ

ಪಟ್ಟಣವು ದಿನೇ ದಿನೇ ಬೆಳೆಯುತ್ತಿದ್ದು ಬೇರೆ ಬೇರೆ ಜಿಲ್ಲೆಗಳಿಂದಲೂ ಬಹಳಷ್ಟು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಅಕ್ರಮ ಚಟುವಟಿಕೆ ನಡೆಸುವರ ಚಲನವಲನಗಳ ಗಮನಹರಿಸುವುದಕ್ಕೆ ಜೊತೆಗೆ ಕಳ್ಳತನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವವರ ಮೇಲೆ ನಿಗಾವಹಿಸಲು ಕ್ಯಾಮೆರಾ ಅನುಕೂಲವಾಗಲಿದೆ ಎಂಬುದು ಪೀಸ್ ಅಂಡ್ ಅವರ್ನೆಸ್ ಸಂಘಟನೆಯ ಸಂಸ್ಥಾಪಕ ಅಳ್ತಾಫ್ ಬಿಳಗುಳ ಅವರ ಅಭಿಪ್ರಾಯವಾಗಿದೆ.

ಈ ಸಂದರ್ಭದಲ್ಲಿ ಬದ್ರುದ್ದಿನ್ ಬಿಳಗುಳ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಇದ್ದರು

ವರದಿ :ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!