ಮೂಡಿಗೆರೆ : ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಇಂತಹ ಪ್ರಕರಣಗಳ ಆರೋಪಿಗಳಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಪೀಸ್ & ಅವೆರ್ನೆಸ್ ಟ್ರಸ್ಟ್ (ರಿ) ವತಿಯಿಂದ ಆಗ್ರಹಿಸಲಾಯಿತು
ಶುಕ್ರವಾರ ಸಂಜೆ ಮೂಡಿಗೆರೆಯ ಲಯನ್ಸ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು ಪ್ರತಿಭಟನೆಯಲ್ಲಿ ಪೀಸ್ & ಅವೆರ್ನೆಸ್ ಟ್ರಸ್ಟಿನ ಸಂಸ್ಥಾಪಕ ಅಲ್ತಾಫ್ ಬಿಳಗುಳ, ಜಿಲ್ಲಾಧ್ಯಕ್ಷ ಪ್ರವೀಣ್ ಕುಟ್ಟಿ, ದ.ಸ.ಸಂ ನಾಯಕ ಸುಂದರೇಶ್ ಹೊಯ್ಸಳಲು, ಪಟ್ಟಣ ಪಂಚಾಯತ್ ಸದಸ್ಯ ಮನೋಜ್, ಕಾರ್ಮಿಕ ಮುಖಂಡರಾದ ಕೃಷ್ಣಪ್ಪ, ಶೇಖರ್, SDPI ಮುಖಂಡರಾದ ಖಾಲೀದ್, ಶರೀಫ್, BVS ಮುಖಂಡ ಅಭಿಜಿತ್, ರಮೇಶ್ ಗೋಣಿಬೀಡು, ಭೀಮ್ ಆರ್ಮಿ ಮುಖಂಡ ವಿಶ್ವ, ಸೈಯ್ಯದ್, ಯಾಕೂಬ್, ಬದ್ರುದ್ದೀನ್, ಗಣೇಶ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
