Friday, June 12, 2026
Homeಜಿಲ್ಲಾಸುದ್ದಿBlood Donation Camp: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸಾರ್ವಜನಿಕ ರಕ್ತದಾನ ಶಿಬಿರ

Blood Donation Camp: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸಾರ್ವಜನಿಕ ರಕ್ತದಾನ ಶಿಬಿರ

ಮೂಡಿಗೆರೆ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಪೀಸ್ & ಅವೆರ್ನೆಸ್ ಟ್ರಸ್ಟ್ ಹಾಗೂ ಜೆಸಿಐ ಮೂಡಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ, ಟ್ರಿನಿಟಿ ಬ್ಲಡ್ ಬ್ಯಾಂಕ್, ಚಿಕ್ಕಮಗಳೂರು ಇವರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ಈ ರಕ್ತದಾನ ಶಿಬಿರವು ಜೂನ್ 14, 2026ರಂದು ಭಾನುವಾರ ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಮೂಡಿಗೆರೆಯ ಜೆಸಿ ಭವನದಲ್ಲಿ ನಡೆಯಲಿದೆ.

ರಕ್ತದಾನವು ಜೀವ ಉಳಿಸುವ ಅತ್ಯಂತ ಶ್ರೇಷ್ಠ ಮಾನವೀಯ ಸೇವೆಯಾಗಿದ್ದು, ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳು, ಹೆರಿಗೆ ಸಂದರ್ಭಗಳು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ನಿರಂತರವಾಗಿರುತ್ತದೆ. ಆದ್ದರಿಂದ ಆರೋಗ್ಯವಂತ ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಟ್ರಸ್ಟಿನ ಸಂಸ್ಥಾಪಕರಾದ ಅಲ್ತಾಫ್ ಬಿಳಗುಳ ಮನವಿ ಮಾಡಿದ್ದಾರೆ.

ರಕ್ತದಾನ ಮಾಡಲು ಅರ್ಹತೆ:
18 ರಿಂದ 65 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
ಕನಿಷ್ಠ 45 ಕೆ.ಜಿ. ತೂಕ ಹೊಂದಿರಬೇಕು.
ರಕ್ತದಾನಕ್ಕೂ ಮುನ್ನ ಲಘು ಉಪಹಾರ ಸೇವಿಸಿರಬೇಕು.
ಕಳೆದ ಮೂರು ತಿಂಗಳೊಳಗೆ ರಕ್ತದಾನ ಮಾಡಿರಬಾರದು.

ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕಾರ್ಯಕ್ರಮದ ಆಯೋಜಕರ ಮೊಬೈಲ್ ಸಂಖ್ಯೆ 9972041784 ಸಂಪರ್ಕಿಸಬಹುದಾಗಿದೆ

ವಿಶ್ವ ರಕ್ತದಾನಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಪೀಸ್ & ಅವೆರ್ನೆಸ್ ಟ್ರಸ್ಟ್ ಹಾಗೂ ಜೆಸಿಐ ಮೂಡಿಗೆರೆ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!