ಕುಕ್ಕುಡಿಗೆ ರವೀಂದ್ರ ಕಾರ್ಯಕರ್ತರ ರವಿ ಅಣ್ಣನಿಗೆ ಪಕ್ಷದಿಂದ ಇಷ್ಟೊಂದು ಬೇಜಾರಾಯ್ತಾ? ಅಂತ ರವಿ ಅವರ ಅಭಿಮಾನಿಗಳ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೂ ಈಗ ತಲೆಬಿಸಿಯ ವಿಚಾರವಾಗಿದೆ.
ಹೌದು ಕೊಪ್ಪದ ಒಕ್ಕಲಿಗರ ಸಭಾಭವನದಲ್ಲಿ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಮ್ಮಿಲನ ಮತ್ತು ಜನಜಾಗೃತಿ ಸಮಾವೇಶದಲ್ಲಿ ಕುಕ್ಕುಡಿಗೆ ರವೀಂದ್ರ ಅವರು ಯಾವ ಮುಲಾಜಿಲ್ಲದೇ ತನ್ನ ಆಕ್ರೋಶ ವನ್ನು ಶಾಸಕರಾದ ಟಿಡಿ ರಾಜೇಗೌಡ ಅವರ ಎದುರೇ ಹೊರಹಾಕಿದ್ದು ಈಗ ಕ್ಷೇತ್ರದಾದ್ಯಂತ ಹೊಸ ಸಂಚಲನವನ್ನೆ ಮೂಡಿಸಿದೆ.
ಒಂದು ಕಾಲದಲ್ಲಿ ಕುಕ್ಕುಡಿಗೆ ರವಿ ಅವರ ಕರೆಗೆ ಗಂಟೆಯೊಳಗೆ ನೂರಾರು ಯುವಕರು ಬರುತ್ತಿದ್ದ ಕಾಲವೊಂದಿತ್ತು ರವಿ ಅಂದ್ರೆ ನಂಬಿಕೆ ಅನ್ನೋ ಕಾಲಘಟ್ಟ ಅದು. ಅಂತ ರವಿ ಅವರ ಬಾಯಲ್ಲಿ ನಾವು ಕರುದ್ರೆ ಜನ ಬರಲ್ಲ ಅನ್ನೋ ಮಾತು ಕೇಳಿದ ಮೇಲೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಬಹಳ ದೊಡ್ಡದಾಗಿಯೇ ಬಣ ಬಡಿದಾಟ ಒಳಗೊಳಗೆ ಜೋರಿದೆ ಅನ್ನೋದು ಈಗ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರವಿ ಅವ್ರು ಯಾವುದೇ ಪಕ್ಷದಲ್ಲಿ ಇದ್ರು ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯೋ ವ್ಯಕ್ತಿ, ಯಾವುದೇ ಊರಿನ ಕಾರ್ಯಕ್ರಮ ಆಗ್ಲಿ ಅಥವಾ ಆಟೋಟ ಸ್ಪರ್ಧೆಗಳೇ ಆಗ್ಲಿ, ಅಥವಾ ಕಷ್ಟದಲ್ಲಿ ಇರೋರಿಗೆ ಸ್ಪಂದಿಸುವುದರಲ್ಲಿ ಆಗ್ಲಿ ಕುಕ್ಕುಡಿಗೆ ರವಿ ಅವ್ರು ಕೊಟ್ಟ ಮಾತು ಉಳಿಸಿಕೊಳ್ಳುವ ವ್ಯಕ್ತಿ. ಈಗಲೂ ಅವರ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ನಾನಿದ್ದೀನಿ ಅಂದ್ರೆ ಅದೇನೋ ಒಂದು ದೊಡ್ಡ ಬಲವೇ.
ಹೀಗಾಗಿಯೇ ಇವತ್ತಿಗೂ ರವಿ ಅವ್ರು ಯಾವ ಪಕ್ಷದಲ್ಲೇ ಇರ್ತಾರೋ ಆ ಪಕ್ಷದ್ದೆ ಅಧಿಕಾರ ಅವರ ಊರಿನ ಗ್ರಾಮ ಪಂಚಾಯತಿಯಲ್ಲಿ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ ಅವರ ಮೇಲಿನ ನಂಬಿಕೆಗೆ.
ಕುಕ್ಕುಡಿಗೆ ರವಿ ಅವರ ಹೆಸರಲ್ಲೆ ಒಂದು ಊರು ಕೂಡ ಇರೋದು ಮಲೆನಾಡಿಗರಿಗೆ ತಿಳಿದ ವಿಷಯವೇ ಬಿಡಿ.
ಇಷ್ಟೊಂದು ದೊಡ್ಡ ವ್ಯಕ್ತಿತ್ವದ ವ್ಯಕ್ತಿ ಬಹಳ ಬೇಸರದಿಂದ ಮಾತಾಡ್ತಾರೆ ಅಂದ್ರೆ ಅಲ್ಲೆನೋ ದೊಡ್ಡದಾಗಿಯೇ ಅಗಿದೆ ಎಂಬುದು ಶಾಸಕರಿಗೆ ಅರ್ಥ ಆಗಿ ಸರಿ ಪಡಿಸಿದರೆ ಒಳ್ಳೆಯದೆನೋ ಅಂದ ಹಾಗೆ ಅಧಿಕಾರಿ ಇರುವ ಪಕ್ಷದಲ್ಲಿ ಸಣ್ಣಪುಟ್ಟ ವಿಚಾರಗಳು ಇರೋದೆ ಅಂತ ಶಾಸಕರು ಸುಮ್ಮನಾದ್ರೆ ಮುಂದೆ ಪಕ್ಷಕ್ಕೆ ಬಹಳ ಹೊಡೆತ ಬೀಳುವುದರಲ್ಲಿ ಯಾವ ಅನುಮಾನವೂ ಬೇಡ.
ಒಂದು ನಿಮಿಷನೂ ಇರ್ಲಿಕೆ ರೆಡಿ ಇಲ್ಲ
ಅಲ್ಲಿಯ ವರೆಗೂ ಸಭೆ ಹೊರಗೆ ಸುರಿಯುತ್ತಿದ್ದ ಮಳೆಯಿಂದಾಗಿ ತಣ್ಣನೆ ಚಳಿಯ ವಾತವಾರಣವಿತ್ತು.
ರವಿ ಅವ್ರು ಯಾವಾಗ ಒಂದು ನಿಮಿಷನೂ ಇರ್ಲಿಕೆ ರೆಡಿ ಇಲ್ಲ ಅಂದ್ರೋ ಅವಾಗ ಅಲ್ಲಿಯ ವಾತವರಣ ಬಿಸಿಯಾಗಿ ಬಿಟ್ಟಿತ್ತು. ಸಭೆಯಿಂದ ಎದ್ದಿದ್ದವರು ಕೂಡ ಮತ್ತೆ ಕೂತ್ರು. ಎಲ್ಲರ ಮುಖದಲ್ಲೂ ಸಣ್ಣ ಬೇಸರ, ಮೌನ ಇಡೀ ಸಭೆ ಆವರಿಸಿತ್ತು. ರವಿ ಹಿಂಗ್ಯಾಕೆ ಅಂದ್ರು? ಅವರ ಮಾತಿನ ಅರ್ಥವೇನು? ಒಂದು ನಿಮಿಷನೂ ಇರ್ಲಿಕೆ ರೆಡಿ ಇಲ್ಲ ಅಂದ್ರಲ ಪಕ್ಷ ಬಿಡ್ತಾರ? ಅನ್ನೋ ಪ್ರಶ್ನೆ ಕೆಲ ಕಾರ್ಯಕರ್ತರ ಮನಸ್ಸೊಳಗೆ ಮೂಡಿದಂತೂ ಸತ್ಯ.
ಶಾಸಕರಿಗೆ ರವಿ ಅವ್ರು ಹೇಳಿದ್ದೇನು?
ಹೆಸರಿಗಷ್ಟೇ ಅಧ್ಯಕ್ಷ ಸ್ಥಾನ ಇದ್ದರೆ ಅದು ನನಗೆ ಬೇಡ ಎಲ್ಲರ ಸಹಕಾರ ಇದ್ರೆ ಮಾತ್ರ ಪಕ್ಷ ಕಟ್ಟಲು ಸಾಧ್ಯ ಅನ್ನುವುದು ಅವರ ಅಭಿಪ್ರಾಯ.
ಕೆಲ ನಾಯಕರು, ಕಾರ್ಯಕರ್ತರು ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ಜೊತೆ ಇರ್ತಾರೆ ಅಂತವರಿಗೆ ನಿಮ್ಮ ಬೆಂಬಲ ಅಂತ ಆದ್ರೆ ನಾವು ನಿಮ್ಮ ಬೆಂಬಲಕ್ಕೆ ಇಲ್ಲ ಎನ್ನುವ ಮೂಲಕ ಈಗ ಶಾಸಕರಿಗೂ ಬಿಸಿ ಮುಟ್ಟಿಸಿದ್ದಾರೆ.
ಶೃಂಗೇರಿ ಕ್ಷೇತ್ರದ ಸದ್ಯ ರಾಷ್ಟ್ರ ಮಟ್ಟದಲ್ಲಿ ಸುದ್ದಿ.
ಶೃಂಗೇರಿ ಕ್ಷೇತ್ರದ ಈಗ ರಾಷ್ಟ್ರಮಟ್ಟದಲ್ಲೂ ಹೆಚ್ಚು ಸುದ್ದಿಯಲ್ಲಿರುವ ಕ್ಷೇತ್ರ. ಕೋರ್ಟ್, ಕಛೇರಿ, ಆಣೆ ಪ್ರಮಾಣ, ಹೀಗೆ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದ್ದ ಕ್ಷೇತ್ರ ಈಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಾತಿನಿಂದ ಮತ್ತಷ್ಟು ಸುದ್ದಿಯಲ್ಲಿದೆ.
ಸದ್ಯ ವಿರೋಧ ಪಕ್ಷದವರಿಗೆ ಇದೊಂದು ಚರ್ಚಿಸುವ ವಿಷಯವಾದರೆ, ಶಾಸಕರಿಗೆ ಸರಿಪಡಿಸುವ ವಿಷಯವಾಗಿದೆ. ಮುಂದೆ ಏನಾಗಬಹುದು ಎಂಬುದು ಕಾದು ನೋಡಬೇಕಾಗಿದೆ.
ಶಶಿ ಬೆತ್ತದಕೊಳಲು
