Wednesday, August 12, 2026
Homeಜಿಲ್ಲಾಸುದ್ದಿಮಲೆನಾಡಿನ ಭಾಗಗಳಲ್ಲಿ ಹಳ್ಳ ಗುಂಡಿಯಿಂದ ಕೂಡಿರುವ ರಸ್ತೆ: ಅಧಿಕಾರಿಗಳ ನಿರ್ಲಕ್ಷ್ಯ: ಸುಮೊಟೊ ಕೇಸ್ ದಾಖಲು

ಮಲೆನಾಡಿನ ಭಾಗಗಳಲ್ಲಿ ಹಳ್ಳ ಗುಂಡಿಯಿಂದ ಕೂಡಿರುವ ರಸ್ತೆ: ಅಧಿಕಾರಿಗಳ ನಿರ್ಲಕ್ಷ್ಯ: ಸುಮೊಟೊ ಕೇಸ್ ದಾಖಲು

Telegram Group
Join Now

ಚಿಕ್ಕಮಗಳೂರು: ಮಲೆನಾಡಿನ ಭಾಗಗಳಲ್ಲಿ ಅದೆಷ್ಟೋ ರಸ್ತೆಗಳು ಹಳ್ಳ ಗುಂಡಿಗಳ ರೀತಿಯಲ್ಲಿ ಕಾಣಿಸುತ್ತಿದೆ, ವಾಹನ ಸಂಚರಿಸುವ ಚಾಲಕರಿಗೆ ಹಾಗೂ ಪ್ರತಿ ದಿನ ಪ್ರಯಾಣ ಬೆಳೆಸುವಂತಹ ಪ್ರಯಾಣಿಕರಿಗೂ ಕೂಡ ರಸ್ತೆಯನ್ನು ನೋಡಿ ಬೇಸರ ವ್ಯಕ್ತವಾಗುತ್ತಿತ್ತು. ಇದನ್ನು ಗಮನಿಸಿದ ಲೋಕಾಯುಕ್ತರು ಸುಮೋಟೋ ಪ್ರಕರಣವನ್ನು ದಾಖಲಿಸಿದ್ದಾರೆ.

ರಸ್ತೆಗಳು ಹದಗೆಟ್ಟು ಹೋಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಅದರಲ್ಲೂ ಆಲ್ಲೂರಿನಿಂದ ಜಿಲ್ಲಾ ಕೇಂದ್ರ ಸಂಪರ್ಕಿಸುವ ರಸ್ತೆ ಸಂಪೂರ್ಣ ಗುಂಡಿಗಳಿಂದ ತುಂಬಿ ಹೋಗಿದೆ. ಈ ಬಗ್ಗೆ ಜನ ಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ತೋರಿತ್ತಿದ್ದಾರೆ. ರಸ್ತೆ ಸರಿಪಡಿಸುವಂತೆ ಜನರು ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯ ಪ್ರವಾಸ ಕೈಗೊಂಡಿರುವ ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ರಸ್ತೆಗಳು ಹದಗೆಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, ಚಿಕ್ಕಮಗಳೂರು-ಹಾಸನ ರಸ್ತೆ ಹಾಗೂ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ರಸ್ತೆಯ ಬಗ್ಗೆ ಸುಮೊಟೊ ಪ್ರಕರಣ ದಾಖಲಿಸಲಾಗಿದೆ ಎಂದು ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಮಾಧ್ಯಮಗಳಿಗೆ ಮಾಹಿತಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments