Friday, July 3, 2026
Homeಕ್ರೈಮ್Sakaleshpura: ಹೇಮಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಅಗ್ನಿಶಾಮಕದವರಿಂದ ರಕ್ಷಣೆ!

Sakaleshpura: ಹೇಮಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಅಗ್ನಿಶಾಮಕದವರಿಂದ ರಕ್ಷಣೆ!

Telegram Group
Join Now

ಸಕಲೇಶಪುರ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಳಲಿ ಬೈಪಾಸ್ ರಸ್ತೆಯ ಹೇಮಾವತಿ ಸೇತುವೆ ಬಳಿ ನಡೆದಿದೆ.

ಹೌದು .. ಹಾಸನ ಮೂಲದ ವ್ಯಕ್ತಿ ಚಿರಂತ್(38) ಎಂಬುವರು ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಳಲಿ ಬೈಪಾಸ್ ರಸ್ತೆಯ ಹೇಮಾವತಿ ಸೇತುವೆಯ ಮೇಲಿಂದ ಶುಕ್ರವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಅಗ್ನಿಶಾಮಕದವರಿಗೆ ಮಾಹಿತಿ ತಿಳಿಸಿದ್ದಾರೆ.

ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಚಿರಂತ್ ಎಂಬ ವ್ಯಕ್ತಿ ಹೇಮಾವತಿ ನದಿಯ ಮಧ್ಯದಲ್ಲಿ ಸಿಲುಕಿದ್ದು,ನಂತರ ಓಬಿಎಂ ಬೋಟ್ ಹಾಗೂ ರಕ್ಷಣಾ ಸಲಕರಣೆಗಳ ಸಹಾಯದಿಂದ ವ್ಯಕ್ತಿಯನ್ನು ಜೀವಂತವಾಗಿ ರಕ್ಷಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ಪೊಲೀಸ್ ತನಿಖೆಯಿಂದ ಆತ್ಮಹತ್ಯೆಗೆ ಯತ್ನಿಸಿರುವುದಕ್ಕೆ ಕಾರಣ ಏನೆಂಬುದು ತಿಳಿಯಬೇಕಾಗಿದೆ.ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಶಫೀಕ್ ತಹಶೀಲ್ದಾರ್ ಸಿಬ್ಬಂದಿ ವರ್ಗದವರಾದ ಮಹಮದ್ ಇಸಾಕ್ ,ರಾಜೇಶ್ ,ನವೀನ್ ಕುಮಾರ್, ಶಿವಕುಮಾರ್ , ಪ್ರೀತಂ ಬಸಲಿಂಗಯ್ಯ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments