ಶೃಂಗೇರಿ: ಮಳೆರಾಯನ ಕೃಪೆಗೆ ಕಾಯುತ್ತಿರುವ ಜನರು, ಇದೀಗ ಧಾರ್ಮಿಕ ನಂಬಿಕೆಯ ಮೊರೆ ಹೋಗಿದ್ದಾರೆ. ಮಳೆಗಾಗಿ ಪ್ರಸಿದ್ಧವಾಗಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಮುಖ್ಯಮಂತ್ರಿಗಳು ನೀಡಿದ ಸೂಚನೆ ಮೇರೆಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಹೌದು .. ಈ ವರ್ಷ ಮಳೆಯ ಕೊರತೆಯಿಂದ ಮಲೆನಾಡಿನಲ್ಲಿಯೂ ಮಳೆಯ ಕೊರತೆ ಮತ್ತು ಕುಡಿಯುವ ನೀರಿಗೂ ಅಬಾವ ಉಂಟಾದ ಹಿನ್ನೆಲೆಯಲ್ಲಿ ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿರುವ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕ ಟಿ.ಡಿ.ರಾಜೇಗೌಡ ಅವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಮಳೆರಾಯನ ಕೃಪೆಗಾಗಿ ಹಾಗೂ ಮಲೆನಾಡಿನಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ.
ಆರು ಜನ ಋತ್ವಿಜರಿಂದ ಏಕ ರುದ್ರಾಭಿಷೇಕ, ಪರ್ಜನ್ಯ ಜಪ ನಡೆದಿದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೆಚ್ಚಿನ ದೈವಗಳಲ್ಲೊಂದಾದ ಋಷ್ಯಶೃಂಗೇಶ್ವರ ಅತಿವೃಷ್ಟಿ-ಅನಾವೃಷ್ಟಿ ವೇಳೆ ಡಿಕೆಶಿ ಕೂಡ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದಾರೆ ಈ ಹಿಂದೆಯೂ ಅತಿವೃಷ್ಟಿ-ಅನಾವೃಷ್ಟಿ ವೇಳೆ ಸರ್ಕಾರದಿಂದಲೇ ಪೂಜೆ ನಡೆದಿದೆ,
ಇಲ್ಲಿ ಪೂಜೆ ಮಾಡಿದಾಗ ಬೇಕಾದಾಗ ಮಳೆ ಬಂದಿದೆ, ಬೇಡವಾದಾಗ ಮಳೆ ನಿಂತಿದೆ ಕೆಲ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಕಾಡಿಗೆ ಬೆಂಕಿ ಬಿದ್ದಾಗ ಮಳೆ ಬರಲೆಂದು ಪೂಜೆ ನಡೆದಿತ್ತು ಹೈದ್ರಾಬಾದ್ ಮೂಲದ ಆಸ್ಟ್ರೇಲಿಯಾ ನಿವಾಸಿ ತಾಯಿ ಮೂಲಕ ಪೂಜೆ ಮಾಡಿಸಿದ್ದರುಕಿಗ್ಗಾದಲ್ಲಿ ಪೂಜೆ ನಡೆದಿರೋದ್ರಿಂದ ಮಳೆ ಬರುತ್ತೆ ಅನ್ನೋದು ಮಲೆನಾಡಿಗರ ನಂಬಿಕೆಯಾಗಿದೆ.
