ಮೂಡಿಗೆರೆ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಅಂಗಡಿಯನ್ನು ತೆರವುಗೊಳಿಸಿ ಬ್ರ್ಯಾಂಡ್ ಔಷಧಿ ಮಳಿಗೆಗೆ ಅವಕಾಶ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ
ಹೌದು ಪಟ್ಟಣದ ಸರ್ಕಾರಿ ಆಸ್ಪತ್ರೆ ಒಂದಲ್ಲ ಒಂದು ಅಕ್ರಮ ಅವ್ಯವಸ್ಥೆಗಳ ಗೂಡಾಗಿ ಪರಿಣಮಿಸಿದ್ದು ಸಾರ್ವಜನಿಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇತ್ತೀಚೆಗೆ ಕೆಂಪೇಗೌಡ ಒಕ್ಕಲಿಗ ವೇದಿಕೆ ಸಂಘಟನೆ ಸಾರ್ವಜನಿಕರ ಅನುಕೂಲಕ್ಕಾಗಿ ಆಂಬುಲೆನ್ಸ್ ನೀಡಿದ್ದು ಆಂಬುಲೆನ್ಸ್ ಸ್ವೀಕರಿಸಿದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಆಂಬುಲೆನ್ಸ್ ಚಾಲಕರು ಸಂಘಟನೆ ವಾಹನವನ್ನು ಆವರಣದಲ್ಲಿ ನಿಲ್ಲಿಸಲು ಹಸ್ತಕ್ಷೇಪ ಮಾಡಿದ್ದು ಅನೇಕ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ವೈದ್ಯರ ಕೊರತೆ, ಸ್ವಚ್ಛತೆ, ಇನ್ನಿತರ ವಿಚಾರಗಳಿಂದ ಸುದ್ದಿಯಲ್ಲಿದ್ದ ಆಸ್ಪತ್ರೆ ಇದರ ಬೆನ್ನಲ್ಲೆ ಇದೀಗ ಕಾಣದ ಶಕ್ತಿಗಳ ಕೈವಾಡದಿಂದ ಸಾರ್ವಜನಿಕರ ಅನುಕೂಲವಾಗುವ ಜನೌಷದಿ ಕೇಂದ್ರ ತೆರವುಗೊಳಿಸಿರುವ ಕುರಿತು ಸ್ಥಳೀಯರು ಪ್ರಶ್ನಿಸಿದ್ದಾರೆ.

ಜನಪ್ರತಿನಿಧಿಯ ಒತ್ತಡಕ್ಕೆ ಅಧಿಕಾರಿಗಳು ಮಣಿದು ರಾಜಕಾರಣಿ ಹೇಳಿದಂತೆ ಕುಣಿಯುತ್ತಿದ್ದೂ ಪ್ರಭಲ ರಾಜಕಾರಿಣಿಗೆ ಮಾಮೂಲಿ ಹಣ ತಲುಪುತ್ತಿದ್ದೂ ಪ್ರಭಾವಿ ರಾಜಕಾರಿಣಿಯೊಬ್ಬರ ದೂರವಾಣಿ ಕರೆಗೆ ಅಧಿಕಾರಿಗಳು ಭಯ ಬಿದ್ದು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. ಇವೆಲ್ಲವನ್ನೂ ಗಮನಿಸಿದಾಗ ಬೇಲಿಯೇ ಎದ್ದು ಹೊಲ ಮೆಯುತ್ತಿದೆ ಎಂಬುದಾಗಿ ಸಾರ್ವಜನಿಕರು ದೂರಿದ್ದಾರೆ
ಈ ಕುರಿತು ಸ್ಥಳೀಯರು ಪಬ್ಲಿಕ್ ಇಂಪ್ಯಾಕ್ಟ್ ಪ್ರತಿಕ್ರಿಯಿಸಿ ಮಾತನಾಡಿ ಈ ಹಿಂದೆ ಮಾನ್ಯ ಆರೋಗ್ಯ ಮಂತ್ರಿಗಳಿಗೆ ನಾನು ಈ ಹಿಂದೆ ಹರ್ಷಗುಪ್ತ ಅಧಿಕಾರದಲ್ಲಿದ್ದಾಗ ಮೂಡಿಗೆರೆ ಆಸ್ಪತ್ರೆ ಹಾಗೂ ಇಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ದೂರು ನೀಡಿದ್ದು ಆಸ್ಪತ್ರೆ ಆವರಣದಲ್ಲಿ ಒಂದು ಔಷದಿ ಕೇಂದ್ರ ಇದೆ ಅದರಲ್ಲಿ ಬ್ರಾಂಡೆಡ್ ಔಷದಿ ಮಾರಾಟ ಮಾಡುತ್ತಾರೆ ಮಾನ್ಯ ಮಾಜಿ ಆರೋಗ್ಯ ಮಂತ್ರಿಗಳು ದಿನೇಶ್ ಗುಂಡೂರಾವ್ ಹೊಸ ಆದೇಶ ಹೊರಾಡಿಸಿದ್ದರು ಸರಕಾರದಿಂದ ಆಸ್ಪತ್ರೆ ಆವರಣದಲ್ಲಿ ಯಾವುದೇ ಔಷದಿ ಅಂಗಡಿ ಇಡಲು ಅವಕಾಶ ಇಲ್ಲಾ ನಾವೇ ಸರ್ಕಾರಿ ಆಸ್ಪತ್ರೆಗೆ ಸರ್ಕಾರದಿಂದ ಔಷಧಿ ಸರಬರಾಜು ಮಾಡುತ್ತೇವೆ ಆದ್ದರಿಂದ ಜನೌಷದಿ ತೆಗೆಯಲು ತಿಳಿಸಿದರು ಆದರೆ ಆದೇಶ ಬಂದು ಎರಡೇ ದಿನಕ್ಕೆ ಜನೌಷಧಿ ಮುಚ್ಚಿಸಿದರು.
ಆದರೆ ಈ. ಬ್ರಾಂಡೆಡ್ ಔಷಧಿ ಅಂಗಡಿಯನ್ನು ಆಸ್ಪತ್ರೆ ಅವರಣದಿಂದ ತೆರವುಗೊಳಿಸಲು ಮೀನಾ ಮೇಷ ಎಣಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ
ಈ ಘಟನೆ ಅನೇಕ ಚರ್ಚೆಗೆ ಕಾರಣವಾಗಿದ್ದು ವೈದ್ಯಧಿಕಾರಿಗೆ ಹಾಗೂ ವೈದ್ಯರುಗಳಿಗೆ ಕಮಿಷನ್ ಸೇರುತ್ತಿದ್ದು ಈ ದೃಷ್ಟಿಯಿಂದ ತೆರವುಗೊಳಿಸದೇ ಹಾಗೇ ಬಿಟ್ಟಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹರ್ಷಗುಪ್ತ ಅವರು ನಿಯೋಜನೆ ಮಾಡಿದ್ದರು ಅವರು ಪರಿಶೀಲನೆ ಮಾಡಿ ಈ ಔಷಧಿ ಅಂಗಡಿಯಲ್ಲಿ ಎಲ್ಲಾ ಬ್ರಾಂಡೆಡ್ ಔಷಧಿ ಮಾರಾಟ ಆಗುತ್ತಿದೆ ಎಂದು ಮಹಿಳಾ ಅಧಿಕಾರಿ ಚಂದ್ರಿಕಾ ವರದಿ ನೀಡಿ ಈ ಅಂಗಡಿಯನ್ನು ಮುಚ್ಚಿಸಲು ಆದೇಶ ನೀಡಿದ್ದರು
ಆದರೆ ಇಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲೂ ಸಹ ಎಂದಿನಂತೆ ಬ್ರಾಂಡೆಡ್ ಔಷದಿ ಮಾರಾಟವಾಗುತ್ತಿದೆ ಎಂದು ಗಂಭೀರವಾಗಿ ದೂರಿದ್ದಾರೆ.
ಅದಲ್ಲದೆ ಸರ್ಕಾರಿ ಆಸ್ಪತ್ರೆ ಒಳಗೆ ಇದ್ದ ಜನೌಷಧಿ ಕೇಂದ್ರವನ್ನು ಇವರ ಲಾಭಕ್ಕೆ ಆಸ್ಪತ್ರೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದ್ದಲ್ಲಿ ನಿರ್ಮಿಸಿದ್ದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ
ಆಸ್ಪತ್ರೆ ಆವರಣದಲ್ಲಿರುವ ಔಷದಿ ಮಳಿಗೆ ಪ್ರಧಾನಮಂತ್ರಿ ಜನಔಷದಿ ನಾಮ ಫಲಕ ಬಳಸದೆ ಜನಔಷದಿ ಹೆಸರಲ್ಲಿ ಬ್ರಾಂಡೆಡ್ ಮಾರುತಿದ್ದಾರೆ. ಈ ಕೂಡಲೆ ಇದರ ಬಗ್ಗೆ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ
ವರದಿ-ಪುನೀತ್ ಕಡಿದಾಳು
9483811948
