Saturday, July 4, 2026
Homeಜಿಲ್ಲಾಸುದ್ದಿಚಿಕ್ಕಮಗಳೂರಲ್ಲಿ ಬೆಚ್ಚಿ ಬೀಳಿಸುವ ಕೃತ್ಯ: ಅಪ್ರಾಪ್ತೆಯನ್ನು ಹಲ್ಲೆ ನಡೆಸಿ ಓಡುತ್ತಿದ್ದ ಪಾಗಲ್‌ ಪ್ರೇಮಿಯನ್ನ ಹಿಡಿದ ಸಾರ್ವಜನಿಕರು

ಚಿಕ್ಕಮಗಳೂರಲ್ಲಿ ಬೆಚ್ಚಿ ಬೀಳಿಸುವ ಕೃತ್ಯ: ಅಪ್ರಾಪ್ತೆಯನ್ನು ಹಲ್ಲೆ ನಡೆಸಿ ಓಡುತ್ತಿದ್ದ ಪಾಗಲ್‌ ಪ್ರೇಮಿಯನ್ನ ಹಿಡಿದ ಸಾರ್ವಜನಿಕರು

Telegram Group
Join Now

ಚಿಕ್ಕಮಗಳೂರು: ಕಾಫಿನಾಡಿನ ಹೃದಯಭಾಗದಲ್ಲಿರುವ ಎಸ್ಪಿ-ಡಿಸಿ ಕಚೇರಿ ಪಕ್ಕದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ.

ಹೌದು .. ಕಡೂರು ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ಹಾಸ್ಟೇಲ್‌ ನಲ್ಲಿ ಇದ್ದುಕೊಂಡು ಓದುತ್ತಿದ್ದಳು. ಆದರೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ಪಾಗಲ್‌ ಪ್ರೇಮಿ ಪುನೀತ್‌ ಈ ಹುಡುಗಿಯ ಹಿಂದೆ ಬಿದ್ದಿದ್ದನು. ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡು  ಆಟದ ಮೈದಾನದಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಮನಸ್ಸೋ ಇಚ್ಛೆ ಹಲ್ಲೆ  ನಡೆಸಿದ ಘಟನೆ ನಡೆದಿದೆ.

ಈ ವೇಳೆ ಕ್ರೀಡಾಂಗಣದಲ್ಲಿದ್ದ ಸಾರವಜನಿಕರಿಗೆ  ಈ ಕೃತ್ಯ ಕಾಣಿಸಿದ್ದು ಹುಡುಗಿಯ ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳಿಯರು ಬರುತ್ತಿದ್ದಂತೆ ಸ್ಥಳದಿಂದ‌ ಕಾಲ್ಕಿತ್ತ ಪಾಗಲ್ ಪ್ರೇಮಿ ಯುವಕ ಓಡಲು ಯತ್ನಿಸಿದ್ದಾನೆ ಆದರೆ ಹುಚ್ಚು ಪ್ರೇಮಿಯನ್ನ ಎಸ್ಪಿ ಮನೆ ಬಳಿ ಸೆರೆ ಹಿಡಿದು ಅಕ್ಕ ಪಡೆ ಪೊಲೀಸರಿಗೆ ಒಪ್ಪಿಸಿದ ಸ್ಥಳಿಯರು.

ಈ ಯುವಕನ ಕಾಟ ಇದೇ ಮೊದಲಲ್ಲವೆಂದು ಬಯಲಿಗೆ ಬಂದಿದೆ. ಈ ಮೊದಲು ಅಪ್ರಾಪ್ತ ಯುವತಿ ಮನೆ ಬಳಿಯು ಹೋಗಿ ಪ್ರೀತಿಸುವಂತೆ ಬೆದರಿಕೆ ಹಾಕಿದ್ದ ಹಾಗೆ ಬಾಲಕಿಯ ಪೋಷಕರಿಗೂ ಫೋನ್ ಮಾಡಿ ಬೆದರಿಕೆಯೊಡ್ಡಿದ್ದು ಬಾಲಕಿಯ ಹಾಸ್ಟೆಲ್ ಬಳಿಯೂ ಹೋಗಿ ಧಮ್ಕಿ ಕೂಡ ಹಾಕಿದ್ದನು ಇದರಿಂದ ಹಾಸ್ಟೆಲ್ ವಾರ್ಡನ್ ನಿಂದ ಬಾಲಕಿಗೆ ಎಚ್ಚರಿಕೆ ಸಹ ನೀಡಲಾಗಿತ್ತು.

ಸದ್ಯ ಈ ಘಟನೆ ಚಿಕ್ಕಮಗಳೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೇ ನಡೆದಿದ್ದು ಯುವಕನ ವಿರುದ್ಧ ಪೊಲೀಸೆಉ ಕ್ರಮ ಕೈಗೊಂಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments