Monday, August 24, 2026
Homeಜಿಲ್ಲಾಸುದ್ದಿರಾಜ್ಯದಲ್ಲಿ ಉತ್ತಮ ಮಳೆಗಾಗಿ ಕಿಗ್ಗಾ ಋಷ್ಯಶೃಂಗ ದೇವರಿಗೆ ವಿಶೇಷ ಪೂಜೆ: ದೇವಸ್ಥಾನದ ಅಭಿವೃದ್ಧಿಗೆ ವಾರ್ಷಿಕ ₹50...

ರಾಜ್ಯದಲ್ಲಿ ಉತ್ತಮ ಮಳೆಗಾಗಿ ಕಿಗ್ಗಾ ಋಷ್ಯಶೃಂಗ ದೇವರಿಗೆ ವಿಶೇಷ ಪೂಜೆ: ದೇವಸ್ಥಾನದ ಅಭಿವೃದ್ಧಿಗೆ ವಾರ್ಷಿಕ ₹50 ಲಕ್ಷ ಅನುದಾನಕ್ಕೆ ಸಿಎಂ ಸೂಚನೆ!

Telegram Group
Join Now

ಶೃಂಗೇರಿ: ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿರುವ ಶೃಂಗೇರಿ ತಾಲ್ಲೂಕಿನ ಕಿಗ್ಗಾ ಶ್ರೀ ಋಷ್ಯಶೃಂಗ ದೇವರಿಗೆ ಮೂರು ದಿನಗಳ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಮೂರು ದಿನಗಳ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ಪೂರ್ಣಗೊಂಡ ಬಳಿಕ ಶ್ರೀ ಋಷ್ಯಶೃಂಗ ದೇವರ ಪ್ರಸಾದವನ್ನು ಇಂದು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಿಗ್ಗಾ ಶ್ರೀ ಋಷ್ಯಶೃಂಗ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚೆ ನಡೆಯಿತು. ದೇವಸ್ಥಾನದ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳಿಗಾಗಿ ಪ್ರತಿ ವರ್ಷ ₹50 ಲಕ್ಷಗಳಂತೆ ಅನುದಾನ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.
ಕಿಗ್ಗಾ ಋಷ್ಯಶೃಂಗ ಕ್ಷೇತ್ರವು ಮಳೆ ಹಾಗೂ ಕೃಷಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಪವಿತ್ರ ಕ್ಷೇತ್ರವಾಗಿದ್ದು, ರಾಜ್ಯದ ಜನರ ಒಳಿತಿಗಾಗಿ ನಡೆದ ಈ ವಿಶೇಷ ಪೂಜೆ ಮಹತ್ವ ಪಡೆದಿದೆ.

ಈ ಸಂದರ್ಭದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ. ರಾಜೇಗೌಡ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಂ. ರಮೇಶ್ ಭಟ್, ಕೆಡಿಪಿ ಸದಸ್ಯ ಚಂದ್ರಶೇಖರ ಮೇಘಳಬೈಲ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಪ್ರವೀಣ್ ಮೀಗಾ ಹಾಗೂ ಕಸಬಾ ಹೋಬಳಿ ಅಧ್ಯಕ್ಷ ಲಕ್ಷ್ಮೀಶ್ ಆನ್ಕುಳಿ ಉಪಸ್ಥಿತರಿದ್ದರು.
ಕಿಗ್ಗಾ ಕ್ಷೇತ್ರದ ಅಭಿವೃದ್ಧಿಗೆ ಪ್ರತಿವರ್ಷ ₹50 ಲಕ್ಷ ಅನುದಾನ ನೀಡುವ ಮುಖ್ಯಮಂತ್ರಿಗಳ ಸೂಚನೆಯಿಂದ ಕ್ಷೇತ್ರದ ಭಕ್ತರು ಹಾಗೂ ಸ್ಥಳೀಯರಲ್ಲಿ ಸಂತಸ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments