Sunday, August 16, 2026
Homeಜಿಲ್ಲಾಸುದ್ದಿಶೃಂಗೇರಿ: ಬೆಳೆ ಪರಿಹಾರ ಕೋರಿ ರೈತ ಸಂಘ & ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಕೆ

ಶೃಂಗೇರಿ: ಬೆಳೆ ಪರಿಹಾರ ಕೋರಿ ರೈತ ಸಂಘ & ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಕೆ

Telegram Group
Join Now

ಶೃಂಗೇರಿ: ತಾಲ್ಲೂಕಿನಲ್ಲಿ ಈ ಬಾರಿ ಅತಿಯಾದ ಮಳೆಯಿಂದಾಗಿ ನಮ್ಮ ಕೃಷಿ ಬೆಳೆಗಳೆಲ್ಲ ಹಾನಿಗೊಳಗಾಗಿದ್ದು, ಇಲ್ಲಿಯವರೆಗೆ ರೈತರಿಗೆ ಯಾವುದೇ ಬೆಳೆ ವಿಮೆಯ ಪರಿಹಾರದ ಹಣ ಬಂದಿರುವುದಿಲ್ಲ ಎಂದು ಬೆಳೆ ಪರಿಹಾರ ಕೋರಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಗಿದೆ.

ಹೌದು .. ಇದರ ಸಂಬಂಧವಾಗಿ ಸೋಮವಾರ ತಾಲೂಕು ಕಚೇರಿಗೆ ಭೇಟಿ ನೀಡಿ ರೈತ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಗುಂಡಪ್ಪ, ಪೂರ್ಣೇಶ್ ಶ್ರೀಧರ್ ರಾವ್ ಯೋಗಪ್ಪ ಸೇರಿ ತಹಸಿಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ರೈತರು ಬೆಳೆ ಕಳೆದುಕೊಂಡು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಹಾಗೆ ಮಕ್ಕಳ ವಿದ್ಯಾಭ್ಯಾಸ ಹಗೂ ವಿವಿಧ ಬ್ಯಾಂಕುಗಳಲ್ಲಿ ತೆಗೆದುಕೊಂಡ ಸಾಲಗಳನ್ನು ಮರುಪಾವತಿಸಲಾಗದೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಹಾಗೂ ಅತಿವೃಷ್ಠಿಯಿಂದ ಹಾನಿಯಾದ ಅಡಿಕೆ ಮರಗಳು ರೋಗಕ್ಕೆ ತುತ್ತಾಗಿದ್ದು ಇದರ ಚೇತರಿಕೆಗಾಗಿ ಔಷಧಿ ಸಿಂಪಡನೆ ಹಾಗೂ ಗೊಬ್ಬರ ಹಾಕುವ ಉದ್ದೇಶಕ್ಕಾಗಿ ಈ ಸಮಯದಲ್ಲಿ ಸರ್ಕಾರವು ನೆರವು ಧಾವಿಸಿ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆಮಾಡಿ ಎಲ್ಲಾ ರೈತರ ಬ್ಯಾಂಕ್‌ ಗಳಿಗೆ ಸಮರ್ಪಕವಾಗಿ ತಕ್ಷಣ ಜಮಾ ಮಾಡಬೇಕಾಗಿ ಆಗ್ರಹಿಸಲಾಗಿದೆ. ಇಲ್ಲವಾದರೆ ಧರಣಿ ಮಾಡುವುದು ಅನಿವಾರ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments