Monday, February 9, 2026
Homeಜಿಲ್ಲಾಸುದ್ದಿಶೃಂಗೇರಿ: ಕಾಡಾನೆ ದಾಳಿ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹರಿಹರಪುರದ ಸ್ವಾಮೀಜಿ!

ಶೃಂಗೇರಿ: ಕಾಡಾನೆ ದಾಳಿ: ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಹರಿಹರಪುರದ ಸ್ವಾಮೀಜಿ!

ಶೃಂಗೇರಿ: ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಹರೀಶ್ ಹಾಗೂ ಉಮೇಶ್ ರವರ ಮನೆಗೆ ಹರಿಹರಪುರ ಮಠದ ಸ್ವಾಮೀಜಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ .

ಈ ವೇಳೆ ಸ್ವಾಮೀಜಿ ಎದುರು ಅಳಲು ತೋಡಿಕೊಂಡ ಪತ್ನಿ ಆಶಾ ಆಗ ಸಂತೈಸಿದ ಸ್ವಾಮೀಜಿ ಈ ಕುಟುಂಬಗಳ ಜೊತೆ ನಿಲ್ಲೋದಾಗಿ ತಿಳಿಸಿದರು. ಶ್ರಾವ್ಯಳ ಅನಾರೋಗ್ಯ ಸಮಸ್ಯೆಗೆ ಸಹಕಾರ ನೀಡಿ ಹಾಗೂ ಶ್ರಾವ್ಯಾಳ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಕಾರ ಶ್ರೀಮಠದ ಕಡೆಯಿಂದ ನೋಡಿಕೊಳ್ಳುವ ಭರವಸೆ ಕೂಡ ಕುಟುಂಬಸ್ಥರಿಗೆ ನೀಡಿದರು.

ಆ ನಂತರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಮಠದಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು. ಸಚಿದಾನಂದ ಸರಸ್ವತಿ ಸ್ವಾಮೀಜಿಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!