Wednesday, August 12, 2026
Homeಸ್ಪೋರ್ಟ್ಸ್ವಿಶ್ವಕಪ್​ ಗೆದ್ದ ಮಹಿಳಾ ಕ್ರಿಕೆಟ್‌ ಟೀಂ: ಸಿಕ್ಕ ಬಹುಮಾನವೆಷ್ಟು ಗೊತ್ತಾ? 

ವಿಶ್ವಕಪ್​ ಗೆದ್ದ ಮಹಿಳಾ ಕ್ರಿಕೆಟ್‌ ಟೀಂ: ಸಿಕ್ಕ ಬಹುಮಾನವೆಷ್ಟು ಗೊತ್ತಾ? 

Telegram Group
Join Now

ಮುಂಬೈ: 2025ನೇ ಸಾಲಿನಲ್ಲಿ ಚೊಚ್ಚಲ ಮಹಿಳಾ ಕ್ರಿಕೆಟ್‌ ಚಾಂಪಿಯನ್‌ ಆಗಿ ಭಾರತ ಹೊಮ್ಮಿದೆ. ವಿಶ್ವಕಪ್‌ ಗೆಲ್ಲುವ ಮೂಲಕ ಭಾರತೀಯ ಮಹಿಳಾ ತಂಡ 47 ವರ್ಷಗಳ ಪ್ರಶಸ್ತಿ ಬರವನ್ನ ನೀಗಿಸಿಕೊಂಡಿದೆ. ಫೈನಲ್‌ನಲ್ಲಿ ಆಫ್ರಿಕಾ ವಿರುದ್ಧ 52 ರನ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 90 ಕೋಟಿ ರೂಪಾಯಿ ಬಹುಮಾನವನ್ನೂ ಬಾಚಿಕೊಂಡಿದೆ.

ಯೆಸ್‌… ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದ ವನಿತೆಯರು ಐಸಿಸಿಯಿಂದ ಕ್ರಿಕೆಟ್‌ ಇತಿಹಾಸದಲ್ಲೇ ಇದುವರೆಗಿನ ಅತ್ಯಧಿಕ ಬಹುಮಾನ 4.48 ಬಿಲಿಯತನ್‌ ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 39.78 ಕೋಟಿ ರೂ. ಬಾಚಿಕೊಂಡಿದೆ. ಇದರೊಂದಿಗೆ ಬಿಸಿಸಿಐ 51 ಕೋಟಿ ಮೊತ್ತದ ಬಹುಮಾನ ಘೋಷಿಸಿದ್ದಾರೆ. ಒಟ್ಟಾರೆಯಾಗಿ ಟೀಂ ಇಂಡಿಯಾಕ್ಕೆ 90 ಕೋಟಿ ರೂ.ಗೂ ಅಧಿಕ ಮೊತ್ತದ ನಗದು ಬಹುಮಾನ ಸಿಗಲಿದೆ.

ಮಾಧ್ಯಮವೊಂದರಲ್ಲಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಹುಮಾನದ ಮೊತ್ತವನ್ನ ಘೋಷಿಸಿದ್ದಾರೆ. ಐಸಿಸಿ ಅಧ್ಯಕ್ಷ ಜಯ್‌ ಶಾ ಮಹಿಳಾ ಪ್ರಶಸ್ತಿಯ ಹಣವನ್ನ 300%ಗೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments