Wednesday, August 12, 2026
Homeಜಿಲ್ಲಾಸುದ್ದಿಶೃಂಗೇರಿ: ರಾಸಾಯನಿಕ ಗೊಬ್ಬರಕ್ಕೆ ಹೆಚ್ಚಿನ ದರ : ರೈತರಿಂದ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಪತ್ರ...

ಶೃಂಗೇರಿ: ರಾಸಾಯನಿಕ ಗೊಬ್ಬರಕ್ಕೆ ಹೆಚ್ಚಿನ ದರ : ರೈತರಿಂದ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಕೆ!

Telegram Group
Join Now

ಶೃಂಗೇರಿ: ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಎಂಆರ್‌ಪಿ ದರವು 266.50 ಆದರೆ ಗೊಬ್ಬರ ಮಾರಾಟಗಾರರು 300 ರೂ. ಗಳಿಗೆ ಮಾರಾಟ ಮಾಡುವುದನ್ನ ಖಂಡಿಸಿ ರೈತರು ಶೃಂಗೇರಿ ತಾಲೂಕಿನ ತಹಸೀಲ್ದಾರ್‌ ಅವರ ಮುಖಾಂತರ ಚಿಕ್ಕಮಗಳೂರು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.

ಹೌದು .. ಶೃಂಗೇರಿ ತಾಲೂಕಿನ ತಹಸೀಲ್ದಾರ್‌ ಅವರ ಮುಖಾಂತರ ಚಿಕ್ಕಮಗಳೂರು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದು, ಯೂರಿಯಾ ಗೊಬ್ಬರ 266.50 ಆದರೆ ಗೊಬ್ಬರ ಮಾರಾಟಗಾರರು 300 ರೂ. ಗಳಿಗೆ ಮಾರಾಟ ಮಾಡಿದ್ದಾರೆ.

ಇದರ ಬಗ್ಗೆ ಕೇಳಿದಾಗ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು 300 ರೂ ಗಳಿಗೆ ಮಾರಾಟ ಮಾಡಿ ಎಂದು ನಮಗೆ ಹೇಳುತ್ತಿದ್ದಾರೆ ಈ ಹೆಚ್ಚಿನ ದರವು ಲಾರಿ ಬಾಡಿಗೆಯಾಗಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ರೀತಿ ರೈತರಿಗೆ ಆಗುವ ನಷ್ಟವನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡು ಮುಂದೆ ಈ ರೀತಿ ಆಗದಂತೆ ತಡೆದು ರೈತರಿಗೆ ನ್ಯಾಯಯುತವಾದ ಬೆಲೆಯಲ್ಲಿ ಗೊಬ್ಬರವಂತೆ ಮಾರಾಟ ಮಾಡಬೇಕೆಂದು ಕೋರುತ್ತೇವೆ ಎಂದು ತಿಳಿಸಿದ್ದಾರೆ.

ಹಾಗೆ ಈಗ ರೈತರ ಹತ್ತಿರ ಹೆಚ್ಚಿಗೆ ಹಣ ಪಡೆದಿದ್ದನ್ನು ವಾಪಸ್ ಕೊಡಬೇಕಾಗಿ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಈ ವೇಳೆ ಕಾನೊಳ್ಳಿ ಚಂದ್ರಶೇಖರ್, ಬಂಡ್ಲಾಪುರ ಶ್ರೀಧರ್ ರಾವ್, ಪೂರ್ಣೇಶ್ ಮತ್ತಿತರರು ಹಾಜರಿದ್ದರು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments