Tuesday, February 10, 2026
Homeಜಿಲ್ಲಾಸುದ್ದಿಶೃಂಗೇರಿ: ಬಡ, ಮಧ್ಯಮ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್

ಶೃಂಗೇರಿ: ಬಡ, ಮಧ್ಯಮ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್

ಶೃಂಗೇರಿ: ಕ್ಷೇತ್ರದಲ್ಲಿ ಸಮಾಜಿಕ,ಶೈಕ್ಷಣಿಕ,ಆರೋಗ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸಹಕಾರ ನೀಡುತ್ತಾ ಬಡ ಹಾಗೂ ಮಧ್ಯಮ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ವಿಶ್ವನಾಥ್ ಗದ್ದೆಮನೆಯವರು ಈಗ ತಮ್ಮ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ಮೂಲಕ ಶೃಂಗೇರಿ ಕ್ಷೇತ್ರದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಎಮರ್ಜೆನ್ಸಿ ಹೆಲ್ತ್ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.

ಇಂದು ವಿಶ್ವನಾಥ್ ಗದ್ದೆಮನೆ ಅಭಿಮಾನಿ ಬಳಗದ ಸದಸ್ಯರು ಶೃಂಗೇರಿ,ಕೊಪ್ಪ,ಹರಿಹರಪುರದ ಸರ್ಕಾರಿ ಆಸ್ಪತ್ರೆಗಳಿಗೆ ಟ್ರಸ್ಟ್ ವತಿಯಿಂದ ನೀಡಲಾದ ಎಮರ್ಜೆನ್ಸಿ ಕಿಟ್‌ಗಳನ್ನು ವಿತರಿಸಿದರು.

ಈ ಕಿಟ್ ತಜ್ಞ ವೈದ್ಯರ ಸಲಹೆ ಮೇರೆಗೆ ಆಧುನಿಕ ವೈದ್ಯಕೀಯ ಪರಿಕರಗಳಿಂದ ಕೂಡಿದೆ. ಎನ್ ಆರ್ ಪುರ,ಕೊಪ್ಪ,ಶೃಂಗೇರಿ ತಾಲೂಕುಗಳಲ್ಲಿ ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ವಿಕಾಸ್,ರಾಘವೇಂದ್ರ ಹಂಚಿನಮನೆ,ನಾಗೇಶ್ ಗೌಡ್ರು ಜೀರುಳ್ಳಿ,ನಿಶಾಂತ್ ಭೀಮನೆರೆ,ಅಶೋಕ್ ನಿಲವಾನಿ,ಸಚಿನ್,ಸುಹಾಸ್ ಗದ್ದೆಮನೆ ಇತರರು ಉಪಸ್ಥಿತರಿದ್ದರು.

ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ನೀಟ್ ಕಿಟ್
ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮ ಸೇವಾ ಕಾರ್ಯ ಮುಂದುವರೆಸಿರುವ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ಶೃಂಗೇರಿ, ಕೊಪ್ಪ,ಎನ್ ಆರ್ ಪುರ,ಬಾಳೆಹೊನ್ನೂರಿನ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ನಿಟ್ಟಿನಲ್ಲಿ 900 ಪುಸ್ತಕಗಳನ್ನು (50 ಸೆಟ್‌ಗಳು) ಕಾಲೇಜಿನ ಗ್ರಂಥಾಲಯಕ್ಕೆ ಹಸ್ಥಾಂತರಿಸಲಾಯಿತು.

ನೆಸ್ಟ್ ಪಬ್ಲಿಕೇಷನ್ ಸಿದ್ದಪಡಿಸಿದ ಈ ಪುಸ್ತಕಗಳನ್ನು ಟ್ರಸ್ಟ್‌ನ ಉಪಾಧ್ಯಕ್ಷರಾದ ಜಿನಿ ವಿಶ್ವನಾಥ್ ರವರ ನೇತೃತ್ವದಲ್ಲಿ ವಿತರಿಸಲಾಯಿತು,ಇದರಿಂದ ಕ್ಷೇತ್ರದ ಸುಮಾರು 500 ವಿಜ್ಞಾನ ವಿಭಾಗದ ಪಿಯು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ನೆರವಾಗಲಿದೆ.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!