ಶೃಂಗೇರಿ: ಒಕ್ಕಲಿಗ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಿರೋದು ಜೆಡಿಎಸ್ ಗೆ ಲಾಭ ಆಗ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತರರಾದ ಸುಧಾಕರ್ ಶೆಟ್ಟಿ ಅವರು ತಿಳಿಸಿದ್ದಾರೆ.
ಹೌದು .. ಅವರು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿ, ಒಕ್ಕಲಿಗ ಡಿ.ಕೆ. ಶಿವಕುಮಾರ ಸಿಎಂ ಆಗ್ತಿರೋದು ಖುಷಿ ವಿಚಾರ ಇದರಿಂದ ನಮಗೆ ಹೆಚ್ಚು ಲಾಭ ಆಗುತ್ತೆ ಎಂದಿದ್ದಾರೆ.ಕುರ್ಚಿ ಕಾದಾಟದಲ್ಲಿ ಕಾಂಗ್ರೆಸ್ ಸಮಯ ವ್ಯರ್ಥ ಮಾಡಿದೆ ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ 2028ಕ್ಕೆ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತೆ ಎಂದು ಪಬ್ಲಿಕ್ ಇಂಪ್ಯಾಕ್ಟ್’ಗೆ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.
ಹಾಗೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ವತ್ಯಾಸ ವಿಚಾರ ಬಗ್ಗೆಯೂ ಪ್ರತಿಕ್ರಿಯಿಸಿ ಯಾರು ಕಳ್ಳ ಅಂತಾ ಪತ್ತೆ ಹಚ್ಚಲೇಬೇಕಿದೆ ಸುಪ್ರೀಂಕೋರ್ಟ್ ಖಂಡಿತವಾಗಿಯೂ ಪತ್ತೆ ಹಚ್ಚುತ್ತೆ. ಟಿ.ಡಿ ರಾಜೇಗೌಡರಿಗೆ ಸಚಿವ ಸ್ಥಾನ ಸಿಗೋದು ಡೌಟ್. ಜೈಲು ಅಭ್ಯಾಸವಾಗಿರೋ ಸಿಎಂ ಸಚಿವಗಿರಿ ಕೊಡಬಹುದು ಆದ್ರೂ ಟಿ.ಡಿ ರಾಜೇಗೌಡರಿಗೆ ಸಚಿವ ಸ್ಥಾನ ಕೊಟ್ರೆ ಸ್ವಾಗತ ಮಾಡ್ತೇನೆ ಎಂದು ಪಬ್ಲಿಕ್ ಇಂಪ್ಯಾಕ್ಟ್ ಗೆ ಸುಧಾಕರ್ ಶೆಟ್ಟಿ ಹೇಳಿದ್ದಾರೆ.
ಕಾಂಗ್ರೆಸ್ಗೆ ಕಷ್ಟ ಕಾಲದಲ್ಲಿ ಕೈಹಿಡಿದ ಟ್ರಬಲ್ ಶೂಟರ್ ಆಸೆ ಕೊನೆಗೂ ಈಡೇರುತ್ತಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಆಗಲು ಕ್ಷಣಗಣನೆ ಶುರುವಾಗಿದೆ.ಬುಧವಾರ ಸಂಜೆ ಡಿಸಿಎಂ ಹುದ್ದೆಯಿಂದ ಬಡ್ತಿ ಪಡೆದ ಡಿಕೆಶಿ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಏರಲು ಅಣಿ ಆಗಿದ್ದಾರೆ.
