Saturday, August 8, 2026
Homeಜಿಲ್ಲಾಸುದ್ದಿತರೀಕೆರೆ: KSRTC & ಬೈಕ್‌ ನಡುವೆ ಭೀಕರ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು!

ತರೀಕೆರೆ: KSRTC & ಬೈಕ್‌ ನಡುವೆ ಭೀಕರ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು!

Telegram Group
Join Now

ಚಿಕ್ಕಮಗಳೂರು: KSRTC ಮತ್ತು ಬೈಕ್‌ ನಡುವೆ ಭೀಕರ ಅಪಘಾತವಾಗಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

ಹೌದು .. ಸುಮಾ ಟಿ.ಎನ್‌ ಮೃತ ದುರ್ದೈವಿಯಾಗಿದ್ದ ಮಹಿಳೆ. ಶನಿವಾರ ರಾಖಿ ಹಬ್ಬ ಹಿನ್ನೆಲೆಯಲ್ಲಿ ಸಹೋದರನಿಗೆ ರಾಖಿ ಕಟ್ಟಿ ಸಂಭ್ರ ಪಟ್ಟ ಮಹಿಳೆ 24 ಗಂಟೆ ಕಳೆಯುವಷ್ಟರಲ್ಲಿ ಮಸಣ ಸೇರಿದರು. ಇದಕ್ಕೆ ಹೇಳೋದು ದುರ್ದೈವ ಅಂತ.

ಇನ್ನೇನು ಸಹೋದರನಿಗೆ ರಾಖಿ ಕಟ್ಟಿ ಸಹೋದರಿ ತನ್ನ ಗಂಡನ ಜೊತೆ ವಾಪಸ್‌ ಬರುವಾಗ ಆ ಕಡೆಯಿಂದ ಯಮರಾಯನಾಗಿ ಬಂದ ಕೆಎಸ್‌ ಆರ್‌ ಟಿಸಿ ಬಸ್‌ ಇವರು ತೆರಳುತ್ತಿದ್ದ ಬೈಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಬಸ್ಸಿನಡಿ ಬಿದ್ದು ಅಲ್ಲೇ ಪ್ರಾಣ ಪಕ್ಷಿ ಹಾರಿಹೋಗಿದೆ.

ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು ನೋಡುಗರ ಮೈ ಜುಂ ಎನಿಸುವುದು ಮಾತ್ರ ಖಂಡಿತಾ.

ಘಟನೆ ಸಂಬಂಧ ತರೀಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments