Thursday, July 30, 2026
Homeಜಿಲ್ಲಾಸುದ್ದಿಹೆಬ್ಬೆ ಜಲಪಾತದ ದಾರಿಯಲ್ಲಿ ಹುಲಿ ದರ್ಶನ: ಪ್ರವಾಸಿಗರಲ್ಲಿ ಹೆಚ್ಚಿದ ಆತಂಕ

ಹೆಬ್ಬೆ ಜಲಪಾತದ ದಾರಿಯಲ್ಲಿ ಹುಲಿ ದರ್ಶನ: ಪ್ರವಾಸಿಗರಲ್ಲಿ ಹೆಚ್ಚಿದ ಆತಂಕ

Telegram Group
Join Now

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆಯ ಕೆಮ್ಮಣ್ಣುಗುಂಡಿ ಬಳಿಯ ಹೆಬ್ಬೆ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಹುಲಿಯೊಂದು ಕಾಣಿಸಿದ್ದು, ಪ್ರವಾಸಿಗರಲ್ಲಿ ಆತಂಕ ಶುರುವಾಗಿದೆ.

ಹೆಜ್ಜೆ ಹಾಕುತ್ತಾ ದಾರಿ ಮಧ್ಯೆ ಬಂದು ವಾಹನದ ಮುಂದೆ ನಿಂತ ಹುಲಿ, ಬಳಿಕ ಸ್ವಲ್ಪ ದೂರ ಓಡಾಡಿ ಕಾಡಿನತ್ತ ತೆರಳಿದೆ. ಹುಲಿ ಕುಂಟುತ್ತಾ ಸಾಗಿದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲೂ ಭೀತಿ ಮನೆ ಮಾಡಿದೆ. ಹೆಬ್ಬೆ ಜಲಪಾತ ರಸ್ತೆ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡವ ತಣಿಗೆಬೈಲ್ ವಲಯದ ಮೂಲಕ ಹಾದು ಹೋಗುವುದರಿಂದ ಕಾಡು ಪ್ರಾಣಿಗಳ ಓಡಾಟ ಸಾಮಾನ್ಯವಾಗಿದೆ.

ಹೀಗಾಗಿ ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ವಿಶೇಷವಾಗಿ ಅತಿವೇಗದಲ್ಲಿ ವಾಹನ ಚಲಾಯಿಸದಂತೆ ಸೂಚನಾ ಫಲಕ ಅಳವಡಿಸುವುದು, ಸುರಕ್ಷತಾ ಕ್ರಮ ಬಲಪಡಿಸುವಂತೆ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments