Tuesday, August 11, 2026
Homeಜಿಲ್ಲಾಸುದ್ದಿಊರುಬಗೆ: ಹಸಿರು ಫೌಂಡೇಷನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಊರುಬಗೆ: ಹಸಿರು ಫೌಂಡೇಷನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Telegram Group
Join Now

ಮೂಡಿಗೆರೆ: ತಾಲೂಕಿನ ಊರುಬಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲುಬೆಟ್ಟದಲ್ಲಿ ಹಸಿರು ಫೌಂಡೇಷನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರತನ್ ಊರುಬಗೆ, ಫೌಂಡೇಷನ್ ವತಿಯಿಂದ ನಡೆಸುತ್ತಿರುವ ವನಮಹೋತ್ಸವ ಕಾರ್ಯಕ್ರಮ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನ ರೂಪಿಸಲು ತಯಾರಿ ನಡೆಸಲಾಗಿದೆ ಎಂದರು.

ಹಸಿರು ಫೌಂಡೇಷನ್ ವತಿಯಿಂದ 5 ಲಕ್ಷ ನರ್ಸರಿ ಸಸಿಗಳನ್ನು ಬೆಳೆದು ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ರಾಜ್ಯದ್ಯಂತ ಹಸಿರು ಫೌಂಡೇಷನ್ ಕಾರ್ಯಕ್ರಮಗಳನ್ನು ವಿಸ್ತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು…

ಈ ಕಾರ್ಯಕ್ರಮಲ್ಲಿ ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್ ಹೆಗ್ಗುಡ್ಲು, ಕಾರ್ಯದರ್ಶಿ ಅಭಿಜಿತ್ ಹೆಡದಾಳು, ಖಜಾಂಚಿ ಸುನಿಲ್ ಊರುಬಗೆ, ನಿರ್ದೇಶಕರಾದ ಪ್ರದೀಪ್ ಊರುಬಗೆ, ಸುಮಂತ್ ಸತ್ತಿಗನಹಳ್ಳಿ, ಸಚಿನ್ ದುರ್ಗದಹಳ್ಳಿ, ಫೌಂಡೇಷನ್ ಫೀಲ್ಡ್ ಕೋರ್ಡಿನೆಟರ್ ಅದೀಪ್ ಊರುಬಗೆ, ಶೋಧನ್ ಹೊಸಕೆರೆ, ರತನ್ ದೇವರುಂದ ಹಾಗೂ ಜಯಂತ್ ಹೊಸಕೆರೆ ಸ್ಥಳೀಯರಾದ ವೇಲಯುಧನ್ ಮತ್ತು ಗಣೇಶ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments