ಶೃಂಗೇರಿ: ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಠ ವಾರ್ಡಿನ ಕಂಚಿಕುಡಿಗೆ ನಿವಾಸಿ ಶ್ರೀನಿವಾಸ್ ರವರು ಕಳೆದ 5 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು, ಬೇಡಿಕೆಯಂತೆ ಅವರಿಗೆ ವ್ಹೀಲ್ ಚೇರ್ ವಿತರಣೆ ಮಾಡಲಾಯಿತು.
ಹಾಗೆ ವಾಕಿಂಗ್ ಸ್ಟಿಕ್ ಹಾಗೂ ಇತರೆ ಸಹಾಯಕ ಸಾಧನಗಳನ್ನು ನೀಡುವುದು.ಈ ಚಾರಿಟೇಬಲ್ ಟ್ರಸ್ಟ್ ವಿವಿಧ ಜನಪರ ಮತ್ತು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ತೊಡಗಿಸಿಕೊಂಡಿದೆ.
ಈ ಸಂದರ್ಭದಲ್ಲಿ ಪ್ರದೀಪ್ ಕಿಚ್ಚಬ್ಬಿ ರೈತ ಒಕ್ಕೂಟ ನರಸಿಂಹರಾಜಪುರ ತಾಲೂಕು ಅಧ್ಯಕ್ಷರು, ರಕ್ಷಿತ್ ಸಮುತ್ಕರ್ಷ ರೈತಒಕ್ಕೂಟ ಯುವ ಘಟಕ, ಸುನಿಲ್ ನೆಲ್ಲಿಮಕ್ಕಿ ರೈತ ಒಕ್ಕೂಟ. ಅರುಣ್ ಆಚಾರ್ಯ ಹಾಗೂ ಯೋಗೇಶ್ ಆಚಾರ್ಯ ಉಪಸ್ಥಿತರಿದ್ದರು.
