Saturday, August 8, 2026
Homeವಿದೇಶ“ನಾವು ನಿನ್ನೊಂದಿಗಿದ್ದೇವೆ": ಜೈಲಿನಲ್ಲಿರುವ ಉಮರ್ ಖಾಲಿದ್‌ಗೆ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಭಾವುಕ ಪತ್ರ

“ನಾವು ನಿನ್ನೊಂದಿಗಿದ್ದೇವೆ”: ಜೈಲಿನಲ್ಲಿರುವ ಉಮರ್ ಖಾಲಿದ್‌ಗೆ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಭಾವುಕ ಪತ್ರ

Telegram Group
Join Now

ಕಳೆದ ಐದು ವರ್ಷಗಳಿಂದ ದೆಹಲಿಯ ತಿಹಾರ್ ಜೈಲಿನಲ್ಲಿರುವ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‌ಗೆ ಅಂತಾರಾಷ್ಟ್ರೀಯ ಮಟ್ಟದ ಬೆಂಬಲ ವ್ಯಕ್ತವಾಗಿದೆ. ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿರುವ ಝೊಹ್ರಾನ್ ಮಮ್ದಾನಿ ಅವರು ಉಮರ್ ಅವರಿಗೆ ಕೈಬರಹದ ಪತ್ರವೊಂದನ್ನು ಬರೆಯುವ ಮೂಲಕ ತಮ್ಮ ಬೆಂಬಲ ಸಾರಿದ್ದಾರೆ.

ಉಮರ್ ಅವರ ಪೋಷಕರನ್ನು ಭೇಟಿಯಾದ ಸಂದರ್ಭದಲ್ಲಿ ನೀಡಲಾದ ಈ ಪತ್ರದಲ್ಲಿ, ಮಮ್ದಾನಿ ಅವರು ಉಮರ್ ಖಾಲಿದ್ ಅವರ ಧೈರ್ಯ ಮತ್ತು ಸಿದ್ಧಾಂತಗಳನ್ನು ಶ್ಲಾಘಿಸಿದ್ದಾರೆ.

ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಉಮರ್ ಅವರ ಪೋಷಕರನ್ನು ಭೇಟಿಯಾದ ಸಂದರ್ಭದಲ್ಲಿ ಮಮ್ದಾನಿ ಅವರು ಕೈಯಾರೆ ಬರೆದ ಪತ್ರವೊಂದನ್ನು ನೀಡಿದ್ದರು. ಈ ಪತ್ರದಲ್ಲಿ ಅವರು ನಾವೆಲ್ಲ ನಿನ್ನ ಯೋಚಿಸುತ್ತಿದ್ದೇವೆ ಎಂದು ಬರೆದಿದ್ದಾರೆ.

“ಪ್ರಿಯ ಉಮರ್, ಕಹಿಯ ಬಗ್ಗೆ (bitterness) ನೀನು ಹೇಳಿದ ಮಾತುಗಳನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತೇನೆ. ಕಹಿಯು ನಮ್ಮ ಆತ್ಮವನ್ನು ಆವರಿಸದಂತೆ ನೋಡಿಕೊಳ್ಳುವುದು ಎಷ್ಟು ಮುಖ್ಯ ಎಂಬ ನಿನ್ನ ಮಾತುಗಳು ನನಗೆ ಸ್ಫೂರ್ತಿ. ನಿನ್ನ ಪೋಷಕರನ್ನು ಭೇಟಿ ಮಾಡಿದ್ದು ತುಂಬಾ ಸಂತೋಷ ತಂದಿದೆ. ನಾವೆಲ್ಲರೂ ನಿನ್ನ ಬಗ್ಗೆ ಯೋಚಿಸುತ್ತಿದ್ದೇವೆ.” ಎಂದು ಬರೆದಿದ್ದಾರೆ.

ಈ ಪತ್ರವನ್ನು ಉಮರ್ ಖಾಲಿದ್ ಅವರ ಸಹಚರಿ ಬನೋಜ್ಯೋತ್ಸ್ನಾ ಲಾಹಿರಿ ಅವರು ಜನವರಿ 1ರಂದು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ದಿನವೇ ಮಮ್ದಾನಿ ಅವರು ನ್ಯೂಯಾರ್ಕ್ ನಗರದ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಉಮರ್ ಖಾಲಿದ್ ಪ್ರಕರಣದ ಹಿನ್ನೆಲೆ

ಜೆಎನ್‌ಯು (JNU) ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು 2020ರ ದೆಹಲಿ ಗಲಭೆ ಸಂಚಿನ ಆರೋಪದಡಿ UAPA (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಗಿತ್ತು. ಕಳೆದ ಐದು ವರ್ಷಗಳಿಂದ ಅವರು ತಿಹಾರ್ ಜೈಲಿನಲ್ಲಿದ್ದಾರೆ. ಹಲವು ಬಾರಿ ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿವೆ. ಡಿಸೆಂಬರ್ 2025ರಲ್ಲಿ ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments