ಚಿಕ್ಕಮಗಳೂರು: ಏಷ್ಯನ್ ಗೇಮ್ಸ್ ನಲ್ಲಿ ರಿಲೇ ಆಟದಲ್ಲಿ ಕಂಚಿನ ಪದಕ ಗೆದ್ದ ಶೃಂಗೇರಿ ಕ್ಷೇತ್ರದ ಕೊಪ್ಪ ತಾಲೂಕಿನ ಸ್ನೇಹ ಎಸ್ ಎಸ್ ಅವರನ್ನು ಬೆಂಗಳೂರಿನಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ ಡಿ ರಾಜೇಗೌಡ ಅವರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಅಭಿನಂದಿಸಿ ಮಾತನಾಡಿದ ಅವರು ನಿಮ್ಮ ಸಾಧನೆ ನಮ್ಮ ತಾಲೂಕು ಕ್ಷೇತ್ರವಲ್ಲದೇ ಇಡೀ ದೇಶಕ್ಕೆ ಸಂತಸ ತಂದು ದೇಶದ ಕೀರ್ತಿಗೆ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸಾಧನೆಯ ಶಿಖರ ಮತ್ತಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಹಾರೈಸಿದರು.
ಸ್ನೇಹ ಅವರು ಊರಿಗೆ ಮರಳಲಿದ್ದು ತಮ್ಮ ಊರಿನ ಮಾವಿನಕಟ್ಟೆ ಜಟಿಗೇಶ್ವರ ದೇವಸ್ಥಾನದ ಆವರಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ವ್ಯವಸ್ಥೆ ಮಾಡಲಾಗಿದೆ.
ವರದಿ: ಶಶಿ ಬೆತ್ತದಕೊಳಲು
