Friday, July 10, 2026
Homeಸ್ಪೋರ್ಟ್ಸ್ನಾಳೆ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ ಸ್ಟಾರ್‌ ಕ್ರಿಕೆಟರ್ ಸ್ಮೃತಿ ಮಂಧಾನ; ಮದುವೆ ಗಂಡು ಇವರೇ ನೋಡಿ

ನಾಳೆ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ ಸ್ಟಾರ್‌ ಕ್ರಿಕೆಟರ್ ಸ್ಮೃತಿ ಮಂಧಾನ; ಮದುವೆ ಗಂಡು ಇವರೇ ನೋಡಿ

Telegram Group
Join Now

ಭಾರತೀಯ ಕ್ರಿಕೆಟ್‌ ತಂಡದ ಸ್ಟಾರ್‌ ಕ್ರಿಕೆಟರ್ ಸ್ಮೃತಿ ಮಂಧಾನ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನವೆಂಬರ್ 23ರಂದು ಅಂದರೆ ನಾಳೆ(ಭಾನುವಾರ) ಇಂಧೋರ್‌ನಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಸಿನಿಮಾ ತಾರೆಯರು ಹಾಗೂ ಕ್ರಿಕೆಟ್‌ ದಿಗ್ಗಜರು ಭಾಗವಹಿಸುವ ಸಾಧ್ಯತೆ ಇದೆ.

ಈಗಾಗಲೇ ಮದುವೆ ಸಂಭ್ರಮ ಪ್ರಾರಂಭವಾಗಿದ್ದು, ಅರಿಶಿನ ಮತ್ತು ಮೆಹಂದಿ ಶಾಸ್ತ್ರದ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. ಶುಕ್ರವಾರ ನಡೆದ ಹಳದಿ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾದ ಆಟಗಾರ್ತಿಯರಾದ ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ರೊಡ್ರಿಗಸ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಎಲ್ಲರೂ ಸೇರಿ ಮಸ್ತ್‌ ಡ್ಯಾನ್ಸ್ ಮಾಡಿ ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

https://twitter.com/priyans336011/status/1992109925250760982?s=46

ಆಟಗಾರ್ತಿ ಸ್ಮೃತಿ ಮಂಧಾನ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮದುವೆಯಾಗಲಿದ್ದಾರೆ. ಪಲಾಶ್ ಮುಚ್ಚಲ್ ಸಂಗೀತ ಕ್ಷೇತ್ರದಲ್ಲಿ ಚಟುವಟಿಕೆ ಹೊಂದಿದ್ದು, ಪ್ರಸಿದ್ಧ ಬಾಲಿವುಡ್ ಗಾಯಕಿ ಪಲಕ್ ಮುಚ್ಚಲ್ ಅವರ ಕಿರಿಯ ಸಹೋದರರಾಗಿದ್ದಾರೆ.

ಕ್ರೀಡಾಂಗಣದಲ್ಲಿ ಲವ್ ಪ್ರಪೋಸ್‌

ಇತ್ತೀಚೆಗೆ, ಪಲಾಶ್ ಮುಚ್ಚಲ್ ಸ್ಮೃತಿಯವರನ್ನು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಕರೆದೊಯ್ದು ಲವ್ ಪ್ರಪೋಸ್ ಮಾಡಿದರು. ಪಲಾಶ್ ಮುಚ್ಚಲ್ ಸ್ಮೃತಿಯ ಬೆರಳಿಗೆ ವಜ್ರದ ಉಂಗುರವನ್ನು ಹಾಕಿದರು. ಇದೇ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು ಎಂಬುದು ಇಂಟರೆಸ್ಟಿಂಗ್‌ ಸಂಗತಿಯಾಗಿದೆ.

2019 ರಲ್ಲಿ ಪ್ರಾರಂಭವಾದ ಪ್ರೇಮಕಥೆ

ಸ್ಮೃತಿ ಮತ್ತು ಪಲಾಶ್ ಮುಚ್ಚಲ್ ನಡುವೆ 2019 ರಲ್ಲಿ ಪ್ರೀತಿ ಪ್ರಾರಂಭವಾಗಿತ್ತು. ತಮ್ಮ ಸಂಬಂಧವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದರು. 2024 ರಲ್ಲಿ ಅವರ ಲವ್ ಸ್ಟೋರಿ ಸಾರ್ವಜನಿಕವಾಗಿ ತಿಳಿಯಿತು. 6 ವರ್ಷಗಳ ಪ್ರೇಮ ಸಂಬಂಧ ವಿವಾಹದ ಮೂಲಕ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದೆ.

https://twitter.com/shivhatjaansid/status/1991868528421638612?s=46
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments