Friday, June 26, 2026
Homeಕ್ರೈಮ್ಚಿಕ್ಕಮಗಳೂರು: ಕಾರು-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ: ಅದೃಷ್ಟವಶಾತ್ ಚಾಲಕ ಸೇಫ್!

ಚಿಕ್ಕಮಗಳೂರು: ಕಾರು-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ: ಅದೃಷ್ಟವಶಾತ್ ಚಾಲಕ ಸೇಫ್!

ಚಿಕ್ಕಮಗಳೂರು: ಕಾರು-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿರುವ ಘಟನೆ ಕಡೂರು ತಾಲೂಕಿನ ಮಚ್ಚೇರಿ ಗ್ರಾಮದಲ್ಲಿ ನಡೆದಿದೆ.

ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ನ ದೊಡ್ಡ ಚಕ್ರಗಳು ಮುರಿದು ಹೋಗಿದ್ರೆ, ಇನ್ನೊಂದೆಡೆ ಕಾರಿನ ಡ್ರೈವರ್ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಕಾರಿನ ಚಾಲಕ ವಿನಯ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೆ ರಸ್ತೆ ಬದಿ ಬೆಳೆದಿರುವ ಗಿಡಘಂಟೆಗಳೇ ಕಾರಣ ಎಂದು ಆರೋಪಿಸಲಾಗಿದೆ. ಗಿಡಘಂಟೆಗಳಿದ್ದ ಕಾರಣ ತಿರುವಿನಲ್ಲಿ ರಸ್ತೆ ಕಾಣದೇ ಅಪಘಾತ ನಡೆದಿದೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಕಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments