Tuesday, February 10, 2026
Homebig breakingಚಿಕ್ಕಮಗಳೂರು: ಮಳೆ ಆರ್ಭಟಕ್ಕೆ ರೈಲ್ವೇ ಅಂಡ‌ರ್ ಪಾಸ್ ಸಂಪೂರ್ಣ ಮುಳುಗಡೆ

ಚಿಕ್ಕಮಗಳೂರು: ಮಳೆ ಆರ್ಭಟಕ್ಕೆ ರೈಲ್ವೇ ಅಂಡ‌ರ್ ಪಾಸ್ ಸಂಪೂರ್ಣ ಮುಳುಗಡೆ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ರಾತ್ರಿ ಸಮಯದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಮಳೆ ಆರ್ಭಟಕ್ಕೆ ರೈಲ್ವೇ ಅಂಡ‌ರ್ ಪಾಸ್ ಸಂಪೂರ್ಣ ಮುಳುಗಡೆ ಆಗಿದೆ.

ಹೌದು .. ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ಸುರಿದಿದ್ದು, ದೇವನೂರು ಕೆರೆ ಕೋಡಿ ನೀರು ಹೆಚ್ಚಾದ ಹಿನ್ನೆಲೆ ಅಂಡರ್ ಪಾಸ್ ಮುಳುಗಿದೆ. ಇನ್ನ ಎರಡು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬಿಎಸ್ ರಸ್ತೆಯಲ್ಲಿರುವ ರೈಲ್ವೇ ಅಂಡ‌ರ್ ಪಾಸ್ ಇದಾಗಿದೆ.

ಕಡೂರು – ಮಂಗಳೂರು ರಸ್ತೆಯ ಸಖರಾಯಪಟ್ಟಣದಿಂದ ಬಿಹೆಚ್ ರಸ್ತೆ ಸಂಪರ್ಕ ಕಲ್ಪಿಸುವ ಬಿಎಸ್ ರಸ್ತೆಯ ರೈಲ್ವೇ ಅಂಡರ್‌ ಪಾಸ್ ಮುಳುಗಡೆಯಿಂದ ವಾಹನ ಸವಾರರ ಪರದಾಡಿದ್ದಾರೆ. ಇದು ಸಖರಾಯಪಟ್ಟಣ, ಹೋಚಿಹಳ್ಳಿ, ದೇವನೂರು, ಚಿಕ್ಕದೇವನೂರು, ಬಾಣಾವರ, ಅರಸೀಕೆರೆಗೆ ಸಂಪರ್ಕ ಬಂದ್ ಆಗುವಂತೆ ಮಾಡಿದೆ.

ಅವೈಜ್ಞಾನಿಕ ಸೇತುವೆ ನಿರ್ಮಾಣದಿಂದಾಗಿ ಪ್ರತಿ ವರ್ಷ ರೈಲ್ವೇ ಅಂಡರ್ ಪಾಸ್ ಮುಳುಗಡೆ ಆಗುತ್ತಲೇ ಇದ್ದರೂ ಸಂಬಂಧಿಸಿದರು ಎಚ್ಚೆತ್ತುಕೊಂಡು ಸರಿ ಮಾಡುವ ಕೆಲಸ ಮಾಡುತ್ತಿಲ್ಲ ಅನ್ನೋದು ಸ್ಥಳೀಯರ ಆರೋಪವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!