ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗಿತ್ತಿದ್ದು, ಇದರ ಪರಿಣಾಮವಾಗಿ ಪುರಾತನ ಬಾವಿ ಕುಸಿದಿರುವ ಘಟನೆ ಕಡೂರು ತಾಲೂಕಿನ ಗಣಪತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಫಿನಾಡ ಬಯಲುಸೀಮೆ ಗಣಪತಿಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ವರುಣ ಆರ್ಭಟ ಹೆಚ್ಚಾಗಿದ್ದು, ಇದ್ದಕ್ಕಿದ್ದಂತೆ ಬಾವಿ ಕುಸಿದಿದೆ. ನಿರಂತರ ಮಳೆಯಿಂದ ಕಳೆದ ಮೂರು ದಿನಗಳಿಂದ ಬಾವಿಯಲ್ಲಿ ನೀರು ಸಂಪೂರ್ಣ ಭರ್ತಿಯಾಗಿತ್ತು.
ಬಾವಿಯ ಸುತ್ತಮುತ್ತ ಭಾಗ ಭೂಮಿಯ ತೇವಾಂಶದಿಂದಾಗಿ ಇದ್ದ ಜಾಗದಲ್ಲೇ ಸಂಪೂರ್ಣ ಕುಸಿದಿದ್ದು, ನೀರಿನೊಳಗೆ ಪುರಾತನ ಬಾವಿ ಮುಚ್ಚಿ ಹೋಗಿದೆ. ಈ ಘಟನೆಯಿಂದ ಗ್ರಾಮಸ್ಥರು ಭಯದ ವಾತಾವರಣ ಸೃಷ್ಟಿಯಾಗಿದೆ.
ಇದೀಗ ಭೂಮಿಯ ತೇವಾಂಶದಿಂದಾಗಿ ಇದ್ದ ಜಾಗದಲ್ಲೇ ಸಂಪೂರ್ಣ ಕುಸಿದಿದ್ದು, ನೀರಿನೊಳಗೆ ಪುರಾತನ ಬಾವಿ ಮುಚ್ಚಿ ಹೋಗಿದೆ. ಸದ್ಯ ಈ ಘಟನೆಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ.
