Saturday, March 28, 2026
Homeಜಿಲ್ಲಾಸುದ್ದಿಮೂಡಿಗೆರೆ :ಸಮಸ್ಯೆಗಳ ಸಾಗರವಾಯಿತೆ ಹೊಯ್ಸಳ ಕ್ರೀಡಾಂಗಣ?: ನಿರ್ವಾಹಣ ದುಡ್ಡನ್ನು ತಿಂದು ತೆಗಿದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು??

ಮೂಡಿಗೆರೆ :ಸಮಸ್ಯೆಗಳ ಸಾಗರವಾಯಿತೆ ಹೊಯ್ಸಳ ಕ್ರೀಡಾಂಗಣ?: ನಿರ್ವಾಹಣ ದುಡ್ಡನ್ನು ತಿಂದು ತೆಗಿದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು??

ಮೂಡಿಗೆರೆ ತಾಲೂಕು ಹೊಯ್ಸಳ ಕ್ರೀಡಾಂಗಣದ ನಿರ್ವಹಣೆ ಹಣವನ್ನು ತಿಂದು ತೆಗಿದ್ರೆ ಎಂಬುದಾಗಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕ್ರೀಡಾಂಗಣದಲ್ಲಿ ನಡೆಯುವ ಪ್ರತಿ ಖಾಸಗಿ ಕಾರ್ಯಕ್ರಮಗಳಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಅಧಿಕಾರಿಗಳು ನಿಗದಿತ ಹಣ ವಸೂಲಿ ಮಾಡುವುದಲ್ಲದೆ ಅಧಿಕ ಹಣ ವಸೂಲಿ ಮಾಡಿರುವ ಆರೋಪಗಳು ಸಹ ಕೇಳಿ ಬಂದಿದ್ದು. ಇತ್ತೀಚೆಗೆ ಪಟಾಕಿ ಮಳಿಗೆ ಸಂಬಂಧಿದಂತೆ ಅಧಿಕ ಹಣ ಪೀಕಿದ ಬಲವಾದ ಆರೋಪ ಕೇಳಿ ಬಂದಿದ್ದು ಇದಲ್ಲದೆ ಕ್ರಿಕೆಟ್ ಆಯೋಜಕರು ಮೊದಲೇ ಪರವಾನಿಗೆ ಪಡೆದು ಆಯೋಜಿಸಿದ್ದ ಕ್ರೀಡಾಕೂಟವನ್ನು ಹಣದ ಆಸೆಗೆ ಮುಂದೂಡಲು ಒತ್ತಡ ಹೇರಿದ್ದರು ಎಂಬುದು ತಿಳಿದು ಬಂದಿದೆ.

ಇದಲ್ಲದೆ ಹಲವಾರು ವರುಷ ಗಳಿಂದ ನಮ್ಮ ತಾಲೂಕು ಹೊಯ್ಸಳ ಕ್ರೀಡಾಂಗಣ ದಲ್ಲಿ ಹಲವಾರು ರಾಜ್ಯಮಟ್ಟದ ಕ್ರೀಡಾಕೂಟಗಳು ಆಯೋಜನೆ ಗೊಂಡಿದೆ ಯಶಸ್ವಿ ಆಗಿದೆ ಕೂಡ.ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ತಾಲೂಕು ಕ್ರೀಡಾಂಗಣದ ಅವ್ಯವಸ್ಥೆ ವಿಶ್ಲೇಷಣೆ ಮಾಡಲು ಪ್ರಬಂಧ ಬರೆದರು ಸಾಲದು ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.    ಇತ್ತೀಚಿನ ದಿನಗಳಲ್ಲಿ ನಮ್ಮ ತಾಲೂಕು ಕ್ರೀಡಾಂಗಣವು ಅನೇಕ ಅನೈತಿಕ ಚಟುವಟಿಕೆ ಗಳು ಅನೇಕ ಕಾನೂನು ಬಾಯಿರ ಚಟುವಟಿಕೆ ಮಾಡಲು ಪುಂಡ ಪೋಕರಿಗಳ ಅಡ್ಡವಾಗಿ ಪರಿವರ್ತನೆ ಗೊಂಡಿದೆ

ಅನೇಕ ವರುಷಗಳಿಂದ ಹಲವಾರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಸಾಕ್ಷಿ ಯಾಗುತ್ತಿದ್ದ ನಮ್ಮ ಕ್ರೀಡಾಂಗಣದ ಸದ್ಯದ ಪರಿಸ್ಥಿತಿ ತುಂಬಾ ಖೇದಕರ ವಾಗಿದೆ . ಯಾವುದೇ ಮೂಲ  ಸೌಕರ್ಯಗಳು ಇಲ್ಲದಾಗಿದೆ. ಕ್ರೀಡಾಪಟುಗಳಿಗೆ ಸರಿಯಾದ ಶೌಚಾಲಯವಾಗಲಿ ಸರಿಯಾರ ಕುಡಿಯುವ ನೀರಿನ ವ್ಯವಸ್ಥೆ ಗಳಾಗಲಿ ಸರಿಯಾದ ಟ್ರಾಕ್ ವ್ಯವಸ್ಥೆ  ಅಚ್ಚುಕಟ್ಟಿನ ಯಾವುದೇ ಒಂದು ವ್ಯವಸ್ಥೆಗಳು ಕೂಡ ಇಲ್ಲದಾಗಿದೆ. ರಾತ್ರಿ ಆದರೆ ಅನೇಕ ಕಾನೂನು ಬಾಹಿರ ಚಟುವಟಿಗೆಗಳು ನಡೆಯುವ ಸ್ಥಳವಾಗಿದೆ.ಧೂಮಪಾನ ಮದ್ಯಪಾನ ಇನ್ನು ಹಲವು ಚಟುವಟಿಗೆ ಗಳು ಇಲ್ಲಿ ಮಾಮೂಲಿ ಆಗಿ ಬಿಟ್ಟಿದೆ . ಬಾಟಲಿಗಳು ಹೊಡೆದು ಕ್ರೀಡಾಂಗಣಕ್ಕೆ ಹಾಕುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಕ್ರೀಡಾಕೂಟ ನಡೆಸುವ ನೆಪದಲ್ಲಿ ಕ್ರೀಡಾಂಗಣದ ಮದ್ಯಭಾಗದಲ್ಲಿ ಗುಂಡಿ ತೋಡಿ 30-40 ಕಂಬಗಳನ್ನು  ನೆಟ್ಟು  ಕ್ರೀಡಾಂಗಣದ ಮೂಲ ರೂಪವನ್ನೇ ಬದಲಾಯಿಸಲಾಗಿದೆ. ಸದ್ಯದ ಪರಿಸ್ಥಿಯಲ್ಲಿ ಕ್ರೀಡಾಂಗಣವು ಕೃಷಿಗೆ ಯೋಗ್ಯ ಭೂಮಿಯಾಗಿದೆ. ಯಾವುದೇ ಕ್ರೀಡೆ ನಡೆಸಲು ಯೋಗ್ಯವಲ್ಲದ ಮಟ್ಟಕ್ಕೆ ವಿರೂಪ ಗೊಂಡಿದೆ. ಅನೇಕ ವಯಸ್ಕರು ಕ್ರೀಡಾಪಟುಗಳು ಬೆಳಗ್ಗಿನ ವಿಹಾರಕ್ಕೆ ಇದೇ ಕ್ರೀಡಾಂಗಣಕ್ಕೆ ಅವಲಂಬಿತ ರಾಗಿದ್ದಾರೆ ಆದರೆ ನಡೆದಾಡಲು ಸಹ ಆಗದ ಪರಿಸ್ಥಿತಿ  ಎದುರಾಗಿದೆ,ಯಾವುದೇ ಒಂದು ಬದಿಯಲ್ಲಿ ಕೂಡ ವಿದ್ಯುತ್ ಲೈಟ್ ಗಳ ವ್ಯವಸ್ಥೆಯು ಇಲ್ಲದಾಗಿದೆ

ಈ ಕ್ರೀಡಾಂಗಣದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ರಾಜಕೀಯ ವ್ಯಕ್ತಿ ಗಳು ಬಂದು ಹೋಗುತ್ತಾರೆ ಯಾರೂ ಕೂಡ ಕ್ರೀಡಾಂಗಣದ ಬಗ್ಗೆ ಗಮನ ಹರಿಸಲ್ಲ. ಕೇವಲ ಭಾಷಣ ಮಾಡಿ ಹೋಗುತ್ತಾರೆ . ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಕ್ರೀಡಾ ಇಲಾಖೆಯವರು ಮಾನ್ಯ ಶಾಸಕರು  ಅಧಿಕಾರಿಗಳು ಬಂದು ಕ್ರೀಡಾಂಗಣದ ಅವ್ಯವಸ್ಥೆ ಗಳನ್ನು ಸರಿಪಡಿಸಿ ಮೂಲ ಸೌಕರ್ಯ ಒದಗಿಸಿ  ನಮ್ಮ ತಾಲೂಕಿಗೆ ಉತ್ತಮ ದರ್ಜೆಯ ಸುಸಜ್ಜಿತ ವಾದ ಕ್ರೀಡಾಂಗಣವಾಗಿ ಮಾಡಿ ಎಲ್ಲಾ ಕ್ರೀಡಾಪಟುಗಳಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕಾಗಿ ಒತ್ತಾಯಿಸಿದ್ದಾರೆ

ವರದಿ : ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!