Sunday, August 16, 2026
Homeಜಿಲ್ಲಾಸುದ್ದಿಮೂಡಿಗೆರೆ :ರಸ್ತೆ ಬದಿ ಪಲ್ಪರ್ ತ್ಯಾಜ್ಯ; ಕಡಿದಾಳು ಗ್ರಾಮಸ್ಥರ ವಿರೋಧ

ಮೂಡಿಗೆರೆ :ರಸ್ತೆ ಬದಿ ಪಲ್ಪರ್ ತ್ಯಾಜ್ಯ; ಕಡಿದಾಳು ಗ್ರಾಮಸ್ಥರ ವಿರೋಧ

Telegram Group
Join Now

ಮೂಡಿಗೆರೆ : ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳು ಗ್ರಾಮದ ಪ್ರಮುಖ ರಸ್ತೆ ಬದಿ ಕಾಫಿ ಪಲ್ಪರ್ ತ್ಯಾಜ್ಯ ವಿಲೇವಾರಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ

 ಈ ಕುರಿತು ಮಾತನಾಡಿದ ಪುನೀತ್ ಕಾಫಿ ಪಲ್ಪರ್ ತ್ಯಾಜ್ಯ ವನ್ನು ರಸ್ತೆ ಬಳಿ ಸುರಿಯುತ್ತಿದ್ದ ಟ್ರ್ಯಾಕ್ಟರ್ ಚಾಲಕನನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮಾಲೀಕರೇ ಸುರಿಯಲು ತಿಳಿಸಿದ್ದಾರೆ ಎಂಬುದಾಗಿ ಉಡಾಫೆಯಿಂದ ಮಾತನಾಡಿದ್ದಾಗಿ ತಿಳಿಸಿದರು.

ಕಳೆದ ವರ್ಷ ಸಹ ಇದೆ ಸ್ಥಳದಲ್ಲಿ ಸುರಿದಿದ್ದು ಪಲ್ಪರ್ ಮಾಲೀಕ ರಾಜೀವ್ ಅವರಿಗೆ ತಿಳಿಸಿದ್ದರು ಸಹ ಮತ್ತೆ ಪಲ್ಪರ್ ತ್ಯಾಜ್ಯ ಸುರಿಸುತ್ತಿರುವುದು ಸರಿ ಅಲ್ಲ ಎಂದರು.ಕಾಫಿ ಬೆಳೆಗಾರರು ನಾನಾ ಭಾಗಗಳಿಂದ ಕಾಫಿ ಪಲ್ಪರ್  ಘಟಕಗಳಿಗೆ ಬರುವುದು ಸರ್ವೇ ಸಾಮಾನ್ಯ. ಆದರೆ ಅದರ ತ್ಯಾಜ್ಯ ವನ್ನು ರಸ್ತೆಗೆ ಸುರಿದು ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

 ದ್ರವ ರೂಪದ ತ್ಯಾಜ್ಯವನ್ನು ರಸ್ತೆಬದಿ ವಿಲೇವಾರಿ ಮಾಡಿದ್ದೂ. ಇದು ಗ್ರಾಮಸ್ಥರು ತಿರುಗಾಡಲು ಸಮಸ್ಯೆ ಆಗಿದೆ ‘ದ್ರವರೂಪದಲ್ಲಿನ ತ್ಯಾಜ್ಯ, ದುರ್ವಾಸನೆ  ಬೀರುತ್ತಿದ್ದೂ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಜಾನೆ ವಾಯು ವಿಹಾರಕ್ಕೆ ಹೋಗುವರಿಗೂ ವಾಹನ ಸವಾರರಿಗೂ ಕಿರಿ ಕಿರಿ ಉಂಟಾಗುತ್ತಿದೆ ಎಂದರು. ಈ ಕೂಡಲೇ ಸುರಿದಿರುವ ತ್ಯಾಜ್ಯವನ್ನು ವಾಪಸ್ ತೆಗೆದು ಕೊಂಡು ಸ್ವಂತ ಜಮೀನಿನಲ್ಲಿ ಹಾಕಿಕೊಳ್ಳಬೇಕು ಎಂದು ತಿಳಿಸಿದರು. ಈ ಕೂಡಲೇ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments