Friday, March 27, 2026
Homeಕ್ರೈಮ್ಕಡೂರು: ಮಧ್ಯವಯಸ್ಕರಿಗೆ ವೃದ್ಧಾಪ್ಯ ವೇತನ ಅಕ್ರಮ ಮಂಜೂರು : 11 ಜನರ ವಿರುದ್ಧ ದೂರು!

ಕಡೂರು: ಮಧ್ಯವಯಸ್ಕರಿಗೆ ವೃದ್ಧಾಪ್ಯ ವೇತನ ಅಕ್ರಮ ಮಂಜೂರು : 11 ಜನರ ವಿರುದ್ಧ ದೂರು!

ಚಿಕ್ಕಮಗಳೂರು: ಮಧ್ಯ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ ಆರೋಪದಲ್ಲಿ ಕಂದಾಯ ಇಲಾಖೆಯ 11 ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಕಡೂರು ತಾಲ್ಲೂಕು ಕಚೇರಿ ಸಾಮಾಜಿಕ ಭದ್ರತೆ ವಿಭಾಗದ ಹಿಂದಿನ ಶಿರಸ್ತೇದಾರ್ ಆಗಿದ್ದ ಬಿ.ಸಿ. ಕಲ್ಮರುಡಪ್ಪ, ವಿಷಯ ನಿರ್ವಾಹಕ ಗಿರೀಶ್, ಕಂದಾಯ ಅಧಿಕಾರಿ ರವಿಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ಹನುಮಂತಪ್ಪ, ಕಾವ್ಯಾ ಟಿ.ಎಂ., ಕುಮಾರ್ ಜಿ.ಎಂ., ಲಿಂಗರಾಜು ಕೆ., ರವಿ ಕೆ.ಆರ್., ಎಸ್.ಎಂ.ಚನ್ನಬಸವಯ್ಯ, ನಿರ್ಮಲಾ ಟಿ.ಎಸ್., ರವಿಚಂದ್ರ ಎಸ್.ಗೊಗಿ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸರ್ಕಾರಕ್ಕೆ ವಂಚನೆ, ನಕಲಿ ದಾಖಲೆ ಸೃಷ್ಟಿ, ವಂಚಿಸುವ ಉದ್ದೇಶದಿಂದಲೇ ದಾಖಲೆಗಳ ಸೃಷ್ಟಿ, ಕರ್ತವ್ಯ ಲೋಪ ಸೇರಿ ಹಲವು ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

‘ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನವನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನವರು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಸಾಮಾಜಿಕ ಭದ್ರತಾ ವಿಭಾಗದ ಶಿರಸ್ತೇದಾರ್ (ಉಪ ತಹಶೀಲ್ದಾರ್) ಬಿ.ಸಿ.ಕಲ್ಮರುಡಪ್ಪ ಅವರು ಲಾಗಿನ್ ದುರ್ಬಳಕೆ ಮಾಡಿಕೊಂಡು 35–40 ವಯಸ್ಸಿನವರಿಗೂ ವೇತನ ಮಂಜೂರು ಮಾಡಿದ್ದಾರೆ’ ಎಂಬ ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದ್ದವು.

ಅಂದಿನ ಉಪವಿಭಾಗಾಧಿಕಾರಿ ಅವರಿಂದ ಪ್ರಾಥಮಿಕ ತನಿಖೆ ಮಾಡಿಸಿದ್ದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಕಲ್ಮರುಡಪ್ಪ ಅವರನ್ನು ಅಮಾನತು ಮಾಡಿದ್ದರು. ತಹಶೀಲ್ದಾರ್‌ ಸರ್ಕಾರಕ್ಕೆ ವಿಚಾರಣಾ ವರದಿ ಸಲ್ಲಿಸಿದ್ದರು. ಅಕ್ರಮವಾಗಿ 64 ಜನರಿಗೆ ಪಿಂಚಣಿ ಮಂಜೂರು ಮಾಡಿ ಸರ್ಕಾರಕ್ಕೆ ₹9.03 ಲಕ್ಷ ನಷ್ಟ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ಅಷ್ಟೂ ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಂದಾಯ ಇಲಾಖೆ ಸೂಚನೆ ನೀಡಿತ್ತು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಡೂರು ತಹಶೀಲ್ದಾರ್ ಪೊಲೀಸರಿಗೆ ದೂರು ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!