Wednesday, March 25, 2026
Homeಆರೋಗ್ಯDandruff: ಚಳಿಗಾಲದಲ್ಲಿ ಕಾಡುವ ತಲೆಹೊಟ್ಟಿಗೆ ನೈಸರ್ಗಿಕ ಮನೆಮದ್ದು!

Dandruff: ಚಳಿಗಾಲದಲ್ಲಿ ಕಾಡುವ ತಲೆಹೊಟ್ಟಿಗೆ ನೈಸರ್ಗಿಕ ಮನೆಮದ್ದು!

ಚಳಿಗಾಲ ಬಂತೆಂದರೆ ತಲೆಹೊಟ್ಟಿನ (Dandruff) ಸಮಸ್ಯೆ ಸಾಮಾನ್ಯ. ನೆತ್ತಿಯ ಮೇಲೆ ಆರಾಮವಾಗಿ ಮನೆ ಮಾಡುವ ಈ ಬಿಳಿ ಪದರಗಳು, ಕಪ್ಪು ಬಟ್ಟೆಗಳನ್ನು ಧರಿಸಲು ಹಿಂಜರಿಕೆ ಉಂಟು ಮಾಡುತ್ತವೆ. ಎಷ್ಟೇ ಶಾಂಪೂ ಮತ್ತು ಇತರ ಹೇರ್ ಕೇರ್ ಉತ್ಪನ್ನಗಳು ಬಳಸಿದರೂ ತಲೆಹೊಟ್ಟನ್ನು ಕಡಿಮೆ ಮಾಡುವುದು ಕಷ್ಟ. 

ಚರ್ಮರೋಗ ತಜ್ಞರಾದ ಡಾ. ರಿಂಕಿ ಕಪೂರ್ ಅವರ ಪ್ರಕಾರ, ಕೆಲವು ಮನೆಮದ್ದುಗಳು (Home Remedies) ತಲೆಹೊಟ್ಟು ನಿವಾರಣೆಗೆ ಮ್ಯಾಜಿಕ್ ಆಗಿ ಕೆಲಸ ಮಾಡುತ್ತವೆ!  ಅವು ಯಾವುವು ಎಂದು ನೋಡೋಣ..

ತಲೆಹೊಟ್ಟು ನಿವಾರಣೆಗೆ 8 ಅತ್ಯುತ್ತಮ ಮನೆಮದ್ದುಗಳು

1. ತೆಂಗಿನ ಎಣ್ಣೆ ಮತ್ತು ನಿಂಬೆ (Coconut Oil and Lemon)

ತೆಂಗಿನ ಎಣ್ಣೆ ತೇವಾಂಶ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ನಿಂಬೆ ನೆತ್ತಿಯ ಪಿಹೆಚ್ (pH) ಅನ್ನು ಸಮತೋಲನಗೊಳಿಸಿ, ತಲೆಹೊಟ್ಟಿಗೆ ಕಾರಣವಾಗುವ ಯೀಸ್ಟ್ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.

  • ಬಳಕೆ ವಿಧಾನ: 2 ಚಮಚ ತೆಂಗಿನ ಎಣ್ಣೆಗೆ 1 ಚಮಚ ನಿಂಬೆ ರಸ ಸೇರಿಸಿ, 5-10 ನಿಮಿಷ ನೆತ್ತಿಗೆ ಮಸಾಜ್ ಮಾಡಿ. 20-30 ನಿಮಿಷ ಬಿಟ್ಟು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಬಳಸಿ.

2. ಅಲೋವೆರಾ ಜೆಲ್ (Aloe Vera Gel)

ಇದು ಶಾಂತಗೊಳಿಸುವ ಮತ್ತು ಉರಿಯೂತ ನಿವಾರಕ (Anti-inflammatory) ಗುಣಗಳನ್ನು ಹೊಂದಿದೆ. ನೆತ್ತಿಗೆ ತೇವಾಂಶ ನೀಡಿ ತುರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಸೌಮ್ಯವಾಗಿ ಎಫ್ಫೋಲಿಯೇಟ್ ಮಾಡುತ್ತದೆ.

  • ಬಳಕೆ ವಿಧಾನ: ತಾಜಾ ಅಲೋವೆರಾ ಜೆಲ್ ತೆಗೆದು ನೇರವಾಗಿ ನೆತ್ತಿಗೆ ಹಚ್ಚಿ. 30 ನಿಮಿಷಗಳ ನಂತರ ಉಗುರುಬೆಚ್ಚನೆಯ ನೀರಿನಿಂದ ಮತ್ತು ಶಾಂಪೂಯಿಂದ ತೊಳೆಯಿರಿ.

3. ಆಪಲ್ ಸೈಡರ್ ವಿನೆಗರ್ (ACV)

ಇದರ ಆಂಟಿಫಂಗಲ್ ಗುಣಲಕ್ಷಣಗಳು ನೆತ್ತಿಯ ಫಿಹೆಚ್ (pH) ಅನ್ನು ಸಮತೋಲನಗೊಳಿಸುತ್ತವೆ. ಇದು ತಲೆಹೊಟ್ಟಿಗೆ ಕಾರಣವಾಗುವ ಸೂಕ್ಷ್ಮಜೀವಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

  • ಬಳಕೆ ವಿಧಾನ: ಸಮಾನ ಭಾಗದ ACV ಮತ್ತು ನೀರನ್ನು ಮಿಶ್ರಣ ಮಾಡಿ. ಶಾಂಪೂ ಮಾಡಿದ ನಂತರ ಈ ದ್ರಾವಣವನ್ನು ನೆತ್ತಿಗೆ ಸುರಿದು ಮಸಾಜ್ ಮಾಡಿ. 5 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಿರಿ.

4. ಟೀ ಟ್ರೀ ಆಯಿಲ್ (Tea Tree Oil)

ಇದು ಪ್ರಬಲವಾದ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ತಲೆಹೊಟ್ಟಿಗೆ ಕಾರಣವಾಗುವ ಶಿಲೀಂಧ್ರವನ್ನು ನಿಗ್ರಹಿಸುತ್ತದೆ.

  • ಬಳಕೆ ವಿಧಾನ: 2 ಚಮಚ ವಾಹಕ ಎಣ್ಣೆಗೆ (ತೆಂಗಿನ ಅಥವಾ ಜೋಜೋಬಾ ಎಣ್ಣೆ) 4-5 ಹನಿ ಟೀ ಟ್ರೀ ಆಯಿಲ್ ಸೇರಿಸಿ. ನೆತ್ತಿಗೆ ಮಸಾಜ್ ಮಾಡಿ 20-30 ನಿಮಿಷಗಳ ನಂತರ ತೊಳೆಯಿರಿ.

5. ಮೊಸರು ಮತ್ತು ಜೇನುತುಪ್ಪದ ಮಾಸ್ಕ್ (Yogurt and Honey Mask)

ಮೊಸರು ಪ್ರೋಬಯಾಟಿಕ್‌ ಗುಣಗಳನ್ನು ಹೊಂದಿದ್ದು ಶಿಲೀಂಧ್ರ ಬೆಳವಣಿಗೆಯನ್ನು ತಡೆಯುತ್ತದೆ. ಜೇನುತುಪ್ಪ ತೇವಾಂಶವನ್ನು ಹಿಡಿದಿಟ್ಟುಕೊಂಡು ನೆತ್ತಿಯನ್ನು ಪೋಷಿಸುತ್ತದೆ.

  • ಬಳಕೆ ವಿಧಾನ: 3 ಚಮಚ ಮೊಸರಿಗೆ 1 ಚಮಚ ಜೇನುತುಪ್ಪ ಸೇರಿಸಿ. ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿಗೆ ಸಮವಾಗಿ ಹಚ್ಚಿ. 30 ನಿಮಿಷ ಬಿಟ್ಟು ಶಾಂಪೂಯಿಂದ ತೊಳೆಯಿರಿ.

6. ಬೇವಿನ ಎಲೆ (Neem Leaves)

ಬೇವಿನ ಎಲೆಗಳು ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಶತಮಾನಗಳಿಂದಲೂ ಹೊಂದಿವೆ. ಇದು ತಲೆಹೊಟ್ಟು ಮತ್ತು ನೆತ್ತಿಯ ಕೆಂಪಾಗುವಿಕೆಯನ್ನು ನಿವಾರಿಸುತ್ತದೆ.

  • ಬಳಕೆ ವಿಧಾನ: ಒಂದು ಹಿಡಿ ಬೇವಿನ ಎಲೆಗಳನ್ನು 2 ಕಪ್ ನೀರಿನಲ್ಲಿ 10-15 ನಿಮಿಷ ಕುದಿಸಿ. ಸೋಸಿ, ತಣ್ಣಗಾಗಲು ಬಿಡಿ. ಶಾಂಪೂ ಮಾಡಿದ ನಂತರ ಈ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ.

7. ಅಡಿಗೆ ಸೋಡಾ (Baking Soda)

ಇದು ಸತ್ತ ಚರ್ಮದ ಕೋಶಗಳು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಎಫ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನೆತ್ತಿಯ ಫಿಹೆಚ್ (pH) ಅನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

  • ಬಳಕೆ ವಿಧಾನ: 1 ಚಮಚ ಅಡಿಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನೇರವಾಗಿ ನೆತ್ತಿಗೆ ಹಚ್ಚಿ 1-2 ನಿಮಿಷ ಮಸಾಜ್ ಮಾಡಿ. ನಂತರ ಚೆನ್ನಾಗಿ ತೊಳೆಯಿರಿ ಮತ್ತು ಕಂಡಿಷನರ್ ಬಳಸಿ.

8. ಆಲಿವ್ ಎಣ್ಣೆ ಮಸಾಜ್ (Olive Oil Massage)

ಆಲಿವ್ ಎಣ್ಣೆ ನೆತ್ತಿಗೆ ಹಚ್ಚ. ಇದು ತಲೆಹೊಟ್ಟಿಗೆ ಕಾರಣವಾಗುವ ಶುಷ್ಕತೆಯನ್ನು ತಡೆಯುತ್ತದೆ ಮತ್ತು ಹಠಮಾರಿ ತಲೆಹೊಟ್ಟಿನ ಪದರಗಳನ್ನು ಮೃದುಗೊಳಿಸಿ ತೊಳೆಯಲು ಸುಲಭವಾಗಿಸುತ್ತದೆ.

  • ಬಳಕೆ ವಿಧಾನ: 2-3 ಚಮಚ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ನೆತ್ತಿಗೆ ನಿಧಾನವಾಗಿ ಮಸಾಜ್ ಮಾಡಿ ಶವರ್ ಕ್ಯಾಪ್‌ನಿಂದ ಮುಚ್ಚಿ. ರಾತ್ರಿಯಿಡೀ ಬಿಟ್ಟು ಮರುದಿನ ಬೆಳಿಗ್ಗೆ ತೊಳೆಯಿರಿ.

ತಲೆಹೊಟ್ಟು ರಹಿತ ನೆತ್ತಿಗಾಗಿ ಇನ್ನಷ್ಟು ಸಲಹೆಗಳು

ನಿಮ್ಮ ದೈನಂದಿನ ಜೀವನಶೈಲಿಯ ಅಭ್ಯಾಸಗಳು ಸಹ ನಿಮ್ಮ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಈ ಕೆಳಗಿನ ಕ್ರಮಗಳನ್ನು ಪಾಲಿಸಿ:

  • ಬಿಸಿ ನೀರು ಬೇಡ: ಕೂದಲನ್ನು ತೊಳೆಯಲು ಹೆಚ್ಚು ಬಿಸಿ ನೀರನ್ನು ಬಳಸಬೇಡಿ, ಅದು ನೆತ್ತಿಯನ್ನು ಡ್ರೈ ಮಾಡುತ್ತದೆ.
  • ಆಹಾರ: ಸತು(Zinc),ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಬಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ.
  • ಒತ್ತಡ ನಿರ್ವಹಣೆ: ಒತ್ತಡವು ತಲೆಹೊಟ್ಟನ್ನು ಹೆಚ್ಚಿಸುವುದರಿಂದ, ಅದನ್ನು ಸರಿಯಾಗಿ ನಿರ್ವಹಿಸಿ.
  • ದಿನಚರಿ: ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಸ್ಥಿರವಾದ ಕೂದಲ ರಕ್ಷಣೆಯ ದಿನಚರಿಯನ್ನು ಅನುಸರಿಸಿ.

ತಲೆಹೊಟ್ಟು ದೀರ್ಘಕಾಲದ ಸಮಸ್ಯೆಯಲ್ಲ. ಈ 8 ಮನೆಮದ್ದುಗಳೊಂದಿಗೆ ನೀವು ನೈಸರ್ಗಿಕವಾಗಿ ತಲೆಹೊಟ್ಟು ನಿವಾರಿಸಬಹುದು. ತಲೆಹೊಟ್ಟಿನ ಸಮಸ್ಯೆಯಿಂದ ಹೈರಾಣಗಿದ್ದರೆ ಮನೆಯಲ್ಲೊಮ್ಮೆ ಟ್ರೈ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!