Friday, March 27, 2026
Homeಸ್ಪೋರ್ಟ್ಸ್T20 World Cup 2026: ಬಲಿಷ್ಠ ಭಾರತ ತಂಡ ಹಾಗೂ ಸಂಪೂರ್ಣ ವೇಳಾಪಟ್ಟಿ ಹೀಗಿದೆ!

T20 World Cup 2026: ಬಲಿಷ್ಠ ಭಾರತ ತಂಡ ಹಾಗೂ ಸಂಪೂರ್ಣ ವೇಳಾಪಟ್ಟಿ ಹೀಗಿದೆ!

ಕ್ರಿಕೆಟ್‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 2026ರ ಟಿ20 ವಿಶ್ವಕಪ್‌ಗಾಗಿ ಬಿಸಿಸಿಐ (BCCI) ಭಾರತ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ಈ ಬಲಿಷ್ಠ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಈ ಬಾರಿ ಶುಭ್​​ಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಕ್ರಿಕೆಟ್‌ ಅಭಿಮಾನಿಗಳಿಗೆ ಚೆರ್ಚೆಯ ವಿಷಯವಾಗಿದೆ.

ಭಾರತ ತಂಡದ ಅಧಿಕೃತ ಸ್ಕ್ವಾಡ್:

ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಟೀಮ್ ಇಂಡಿಯಾದ ಪಂದ್ಯಗಳ ವೇಳಾಪಟ್ಟಿ

  • ಫೆಬ್ರವರಿ 7: ಭಾರತ vs ಯುಎಸ್​​ಎ (ಮುಂಬೈ)
  • ಫೆಬ್ರವರಿ 12: ಭಾರತ vs ನಮೀಬಿಯಾ (ದೆಹಲಿ)
  • ಫೆಬ್ರವರಿ 15: ಭಾರತ vs ಪಾಕಿಸ್ತಾನ್ (ಕೊಲಂಬೊ, ಆರ್. ಪ್ರೇಮದಾಸ ಸ್ಟೇಡಿಯಂ)
  • ಫೆಬ್ರವರಿ 18: ಭಾರತ vs ನೆದರ್​ಲೆಂಡ್ಸ್ (ಅಹಮದಾಬಾದ್)

ಟೂರ್ನಿಯ ಸ್ವರೂಪ (Tournament Format):

  • ಸೂಪರ್-8 ಹಂತ: ಮೊದಲ ಹಂತದ 4 ಗ್ರೂಪ್‌ಗಳಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೂಪರ್-8 ರ ಹಂತಕ್ಕೆ ಅರ್ಹತೆ ಪಡೆಯುತ್ತವೆ.
  • ಸೆಮಿಫೈನಲ್: ಸೂಪರ್-8 ಹಂತದಲ್ಲಿ ಅಂಕಪಟ್ಟಿಯ ಟಾಪ್-4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ.

ಟಿ20 ವಿಶ್ವಕಪ್ 2026: ನಾಲ್ಕು ಗ್ರೂಪ್‌ಗಳ ವಿವರ

ಈ ಬಾರಿ ಒಟ್ಟು 20 ತಂಡಗಳು ಪಾಲ್ಗೊಳ್ಳುತ್ತಿದ್ದು, ಅವುಗಳನ್ನು 4 ಗ್ರೂಪ್‌ಗಳಾಗಿ ವಿಂಗಡಿಸಲಾಗಿದೆ:

ಗ್ರೂಪ್-1ಗ್ರೂಪ್-2ಗ್ರೂಪ್-3ಗ್ರೂಪ್-4
ಭಾರತಆಸ್ಟ್ರೇಲಿಯಾಇಂಗ್ಲೆಂಡ್ಸೌತ್ ಆಫ್ರಿಕಾ
ಪಾಕಿಸ್ತಾನ್ಶ್ರೀಲಂಕಾವೆಸ್ಟ್ ಇಂಡೀಸ್ನ್ಯೂಝಿಲೆಂಡ್
ಯುಎಸ್​ಎಝಿಂಬಾಬ್ವೆಇಟಲಿಅಫ್ಘಾನಿಸ್ತಾನ್
ನಮೀಬಿಯಾಐರ್ಲೆಂಡ್ಬಾಂಗ್ಲಾದೇಶ್ಯುಎಇ
ನೆದರ್​ಲೆಂಡ್ಸ್ಒಮಾನ್ನೇಪಾಳಕೆನಡಾ

ಬಿಸಿಸಿಐ ಯುವ ಆಟಗಾರರಿಗೆ ಈ ಬಾರಿ ಅವಕಾಶ ನೀಡಲಾಗಿದ್ದು, ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರಂತಹ ಸ್ಫೋಟಕ ಬ್ಯಾಟರ್‌ಗಳಿಗೆ ಮನ್ನಣೆ ನೀಡಿದೆ. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗಕ್ಕೆ ಸಾಥ್ ನೀಡಲು ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಅವರ ‘ಮಿಸ್ಟರಿ’ ಬೌಲಿಂಗ್ ತಂಡದ ಬಲ ಹೆಚ್ಚಿಸಿದೆ. ಇನ್ನು, ಇತ್ತೀಚಿನ ಟಿ20 ಸರಣಿಗಳಲ್ಲಿನ ಸ್ಟ್ರೈಕ್ ರೇಟ್ ಸಮಸ್ಯೆಯಿಂದಾಗಿ ಶುಭ್ಮನ್ ಗಿಲ್ ಸ್ಥಾನ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!