ಚಿಕ್ಕಮಗಳೂರು: ಭಾರತ ಪರಂಪರೆಯಲ್ಲಿ ಮಾತೆ ಸಾವಿತ್ರಿ ಬಾಯಿ ಪುಲೆ ಒಬ್ಬ ಉತ್ತಮ ಸಮಾಜ ಸೇವಕಿ. ಇವರು ಅಂದಿನ ದಿನಗಳಲ್ಲಿದ್ದ ಮೌಡ್ಯತೆ ಕಂದಚಾರಗಳ ವಿರುದ್ದ ಹೋರಾಡಿದ ಧೀಮಂತ ಮಹಿಳೆಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಹೇಳಿದರು.

ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ.) ನವದೆಹಲಿ , ಕೇಂದ್ರ ಕಛೇರಿ ಧಾರವಾಡ, ಕರ್ನಾಟಕ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ ಜಿಲ್ಲೆ ಮತ್ತು ತಾಲೂಕು ಘಟಕ ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾತೆ ಸಾವಿತ್ರಿ ಬಾಯಿ ಫುಲೆಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಶತಮಾನಗಳ ಮಧ್ಯೆಯಲ್ಲಿ ತೂರಿಕೊಂಡ ಕಂದಚಾರಗಳಿಂದಾಗಿ ಹೆಣ್ಣುಮಕ್ಕಳು ವಿದ್ಯೆ ಕಲಿಯಬಾರದೆಂದು ಕೆಲವು ಮೌಡ್ಯರು ಸಮಾಜದಲ್ಲಿ ಹೇರಿದ್ದರು. ಇದನ್ನು ಮೀರಿ ಅಂದಿನ ದಿನಗಳಲ್ಲಿ ಪತಿ ಜ್ಯೊತಿ ಬಾ ಪುಲೆ ಯವರ ಸಹಕಾರದೊಂದಿಗೆ 150 ವರ್ಷಗಳ ಹಿಂದೆ ಮಹಿಳೆಯರಿಗೆ ವಿದ್ಯಾದಾನ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿಯಾಗಿ ಸಾವಿತ್ರಿಬಾಯಿ ಇದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರುದ್ರಪ್ಪರವರು ಶಿಕ್ಷಕರು ಸಂಸ್ಕಾರಯುತವಾದ ಗುಣ ಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕು. ಆ ಮೂಲಕ ಒಳ್ಳೆಯ ಮಾರ್ಗ ತೋರಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರೇಖಾ ನಾಗರಾಜ್ ಹಾಗೂ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಅಧ್ಯಕ್ಷರಾದ ಜ್ಯೋತಿ,ಅಧ್ಯಕ್ಷತೆ ವಹಿಸಿದ್ದು, ಉಪನ್ಯಾಸಕರಾದ ಬಾಗಿ ಬಾಯಿ, ಇಸಿಒ ಅಸ್ಫ ಅಕ್ತರ, ಸುಮನಾ, ಲಕ್ಷ್ಮಣ್, ಕ.ರಾ.ಸ.ನೌಕರರ ಸಂಘದ ನಿರ್ದೇಶಕರಗಳು, ಕಾರ್ಯಾಧ್ಯಕ್ಷರು, ಜಿಲ್ಲಾ ಮತ್ತು ತಾಲೂಕು ಎಲ್ಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಮತ್ತು ತಾಲೂಕು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
